Advertisement

Pro Kabaddi:74 ಅಂಕ ಗಳಿಸಿದ ತಮಿಳ್‌ ತಲೈವಾಸ್‌

11:25 PM Feb 18, 2024 | Team Udayavani |

ಪಂಚಕುಲ: ಎಲ್ಲ ಮುಗಿದ ಮೇಲೆ ಹೋರಾಟ ನಡೆಸಿದ ತಮಿಳ್‌ ತಲೈವಾಸ್‌ 74-37 ಅಂತರದಿಂದ ಬೆಂಗಾಲ್‌ ವಾರಿಯರ್ಗೆ ಸೋಲುಣಿಸಿತು.

Advertisement

ಇದು ಪ್ರೊ ಕಬಡ್ಡಿಯಲ್ಲಿ ತಲೈವಾಸ್‌ ಗಳಿಸಿದ ಅತ್ಯಧಿಕ ಅಂಕ. ಹಾಗೆಯೇ ಪಂದ್ಯವೊಂದರಲ್ಲಿ 111 ಅಂಕ ಒಟ್ಟುಗೂಡಿದ್ದು ಕೂಡ ದಾಖಲೆಯಾಗಿದೆ. ತಲೈವಾಸ್‌ ಎದುರಾಳಿಯನ್ನು ಅತ್ಯಧಿಕ 6 ಸಲ ಆಲೌಟ್‌ ಮಾಡುವ ಮೂಲಕವೂ ದಾಖಲೆ ಸ್ಥಾಪಿಸಿತು. ತಲೈವಾಸ್‌ ಪರ ರೈಡರ್‌ಗಳಾದ ವಿಶಾಲ್‌ ಚಾಹಲ್‌ 19 ಅಂಕ, ನರೇಂದರ್‌ 17 ಅಂಕ ಗಳಿಸಿದರು.

ಬುಲ್ಸ್‌ಗೆ 12ನೇ ಸೋಲು: ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ 46-38 ಅಂತರದ ಸೋಲುಣಿಸಿದ ದಬಾಂಗ್‌ ಡೆಲ್ಲಿ ತನ್ನ 3ನೇ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು (79 ಅಂಕ). ಬುಲ್ಸ್‌ 12ನೇ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next