Advertisement
ಇದರೊಂದಿಗೆ ತಮಿಳ್ 6 ಪಂದ್ಯಗಳಲ್ಲಿ 4ನೇ ಸೋಲುಂಡಿತು. ಜೈಪುರ್ 7 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿತು. ರೈಡರ್ ಅರ್ಜುನ್ ದೇಶ್ವಾಲ್ (7), ಡಿಫೆಂಡರ್ ರೇಝ (5) ಜೈಪುರ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮಿಳ್ ಪರ ರೈಡರ್ ಹಿಮಾಂಶು ನರ್ವಾಲ್ (8) ಪ್ರದರ್ಶನ ಗಮನಾರ್ಹ ಮಟ್ಟದಲ್ಲಿತ್ತು. ಡಿಫೆಂಡರ್ ಎಂ. ಅಭಿಷೇಕ್ 4 ಅಂಕ ತಂದಿತ್ತರು.
ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಗುಜರಾತ್ ಜೈಂಟ್ಸ್ 38-30 ಅಂತರದ ಜಯ ಸಾಧಿಸಿತು. ಇದು 7 ಪಂದ್ಯಗಳಲ್ಲಿ ಗುಜರಾತ್‌ಗೆ ಒಲಿದ 4ನೇ ಗೆಲುವು. ರೈಡರ್ ರಾಕೇಶ್ ಪ್ರಚಂಡ ಆಟವಾಡಿ ಗುಜರಾತ್‌ಗೆ ಮೇಲುಗೈ ತಂದಿತ್ತರು. ರಾಕೇಶ್ ಗಳಿಕೆ 14 ಅಂಕ. ವಿರಾಮದ ವೇಳೆ ಗುಜರಾತ್ 5 ಅಂಕಗಳ ಹಿನ್ನಡೆಯಲ್ಲಿತ್ತು. ಯೋಧಾಸ್ ಪರ ರೈಡರ್ ಸುರೇಂದರ್ ಗಿಲ್ ಏಕಾಂಗಿ ಹೋರಾಟ ನಡೆಸಿ 13 ಅಂಕ ತಂದಿತ್ತರು. ಇದು ಯೋಧಾಸ್ ಆಡಿದ 7ನೇ ಪಂದ್ಯ. ಈವರೆಗೆ ಎರಡನ್ನಷ್ಟೇ ಜಯಿಸಿದೆ. ಇಂದಿನ ಪಂದ್ಯಗಳು
1. ಮುಂಬಾ-ಬೆಂಗಾಲ್ ಆರಂಭ: ರಾತ್ರಿ 8.00
Related Articles
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
Advertisement