Advertisement
ಬೆಂಗಳೂರು-ಟೈಟಾನ್ಸ್ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಡಿಫೆನ್ಸ್‌ನಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಬುಲ್ಸ್ ಗೆಲುವು ಕಂಡಿತು. ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಬುಲ್ಸ್‌ಗೆ ವಿಕಾಸ್ ಖಂಡೋಲ ಲೀಡ್ ತಂದುಕೊಡುವಲ್ಲಿ ಯಶಸ್ವಿಯಾದರು. ವಿರಾಮದ ವೇಳೆ ಪಂದ್ಯ 17-17 ಸಮಬಲದಲ್ಲಿತ್ತು.
Related Articles
ಕೂಟದ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಗೆಲುವಿನ ಆರಂಭ ಪಡೆಯಿತು. ಅದು ಯು ಮುಂಬಾವನ್ನು 41-27 ಅಂಕಗಳಿಂದ ಮಣಿಸಿತು.
Advertisement
ನವೀನ್ ಕುಮಾರ್ ನೇತೃತ್ವದ ಡೆಲ್ಲಿ ಆರಂಭದಿಂದಲೇ ಮುಂಬಾ ಮೇಲೆ ಸವಾರಿ ಮಾಡತೊಡಗಿತು. ಸ್ವತಃ ನವೀನ್ ಕುಮಾರ್ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಇನ್ನೊಂದೆಡೆ ಮುಂಬಾಗೆ ಫಜಲ್ ಅಟ್ರಾಚಲಿ ಅವರ ಅನುಪಸ್ಥಿತಿ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ವಿರಾಮದ ವೇಳೆ ಡೆಲ್ಲಿ 19-10 ಅಂತರದ ಮುನ್ನಡೆಯೊಂದಿಗೆ ಸಂಪೂರ್ಣ ಹಿಡಿತ ಸಾಧಿಸಿತು.
ದ್ವಿತೀಯಾರ್ಧದಲ್ಲೂ ಡೆಲ್ಲಿ ಇದೇ ಲಯದಲ್ಲಿ ಸಾಗಿತು. ಸರಾಸರಿ 10 ಅಂಕಗಳ ಮುನ್ನಡೆಯನ್ನು ಕಾಯ್ದು ಕೊಂಡೇ ಬಂದಿತು. ಸೂಪರ್ ರೈಡರ್ ನವೀನ್ ಪ್ರೊ ಕಬಡ್ಡಿಯ 43ನೇ “ಸೂಪರ್ ಟೆನ್’ನೊಂದಿಗೆ ಗಮನ ಸೆಳೆದರು. ಈ ಪಂದ್ಯದಲ್ಲಿ ಅವರು ತಂದುಕೊಟ್ಟ ಅಂಕ 13. ಇದರಲ್ಲಿ 11 ಟಚ್ ಪಾಯಿಂಟ್, 2 ಬೋನಸ್ ಪಾಯಿಂಟ್ ಸೇರಿತ್ತು.
ಮತ್ತೋರ್ವ ರೈಡರ್ ಆಶು ಮಲಿಕ್ ಉತ್ತಮ ಪ್ರದರ್ಶನ ನೀಡಿ 7 ಅಂಕ ಗಳಿಸಿದರು. ಡಿಫೆಂಡರ್‌ಗಳಾದ ಸಂದೀಪ್ ಧುಲ್, ಕೃಶನ್, ವಿಶಾಲ್ ತಲಾ 4 ಅಂಕ ಸಂಪಾದಿಸಿದರು.
ಮುಂಬಾ ಪರ ಮಿಂಚಿದವರೆಂದರೆ ರೈಡರ್ ಆಶಿಷ್ (7 ಅಂಕ), ಗುಮಾನ್ ಸಿಂಗ್ (4 ಅಂಕ) ಮಾತ್ರ. ಡಿಫೆಂಡರ್ ರಿಂಕು ಗಳಿಸಿದ್ದು 3 ಅಂಕ ಮಾತ್ರ.