Advertisement
ಮೊದಲಾರ್ಧದ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ವಿರಾಮದ ವೇಳೆ ಗುಜರಾತ್ 13-16ರ ಹಿನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಫಜಲ್ ಅಟ್ರಾಚಲಿ ಪಡೆ ತಿರುಗಿ ಬಿತ್ತು. ರೈಡರ್ ರಾಕೇಶ್ ಸರ್ವಾಧಿಕ 5 ಅಂಕ ಗಳಿಸಿದರೆ, ಆಲ್‌ರೌಂಡರ್‌ಗಳಾದ ರೋಹಿತ್ ಗುಲಿಯಾ ಮತ್ತು ಮೊಹಮ್ಮದ್ ನಬಿಭಕ್Ò ತಲಾ 4 ಅಂಕ ತಂದಿತ್ತರು.
ಟೈಟಾನ್ಸ್ ಪರ ನಾಯಕ ಪವನ್ ಸೆಹ್ರಾವತ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು ಪಂದ್ಯದಲ್ಲೇ ಸರ್ವಾಧಿಕ 11 ಅಂಕ ಗಳಿಸಿದರು. ಇದರಲ್ಲಿ 4 ಬೋನಸ್ ಅಂಕ ಸೇರಿತ್ತು. ರೈಡರ್ ರಾಜೇಶ್ 5 ಅಂಕ ತಂದುಕೊಟ್ಟರು. ಮುಂಬಾ ವಿಜಯ
ದ್ವಿತೀಯ ಪಂದ್ಯದಲ್ಲಿ ಯು ಮುಂಬಾ 34-31 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಮುಂಬಾದ ಆಲ್‌ರೌಂಡರ್ ಅಮೀರ್ ಮೊಹಮ್ಮದ್ ಜಾಫರ್ದನೇಶ್ ಅಮೋಘ ಪ್ರದರ್ಶನವಿತ್ತರು. ಅವರದು 11 ಅಂಕಗಳ ಪರಾಕ್ರಮ. ಯೋಧಾಸ್ ಪರ ರೈಡರ್ ಸುರೇಂದರ್ ಗಿಲ್ (7), ಆಲ್‌ರೌಂಡರ್ ವಿಜಯ್ ಮಲಿಕ್ (5) ಉತ್ತಮ ಪ್ರದರ್ಶನ ನೀಡಿದರು.
Related Articles
1. ತಮಿಳ್ – ಡೆಲ್ಲಿ
ಆರಂಭ: ರಾತ್ರಿ 8.00
2. ಗುಜರಾತ್ -ಬುಲ್ಸ್
ಆರಂಭ: ರಾತ್ರಿ 9.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
Advertisement