Advertisement

ಪ್ರೊ ಕಬಡ್ಡಿ: ಪಾಟ್ನಾ ಜಯಭೇರಿ

06:15 AM Nov 16, 2018 | Team Udayavani |

ಮುಂಬೈ: ಇಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪ್ರೊ ಕಬಡ್ಡಿ ಆರನೇ ಆವೃತ್ತಿ ಮುಂಬೈ ಚರಣದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ 38-35 ಅಂಕಗಳ ಅಂತರದಿಂದ ದಬಾಂಗ್‌ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದೆ.

Advertisement

ಪ್ರದೀಪ್‌, ಮಂಜಿತ್‌ ಬಿರುಗಾಳಿ: ಪಾಟ್ನಾ ಪೈರೇಟ್ಸ್‌ ಗೆಲುವಿಗೆ ಮತ್ತೂಮ್ಮೆ ಪ್ರದೀಪ್‌ ನರ್ವಾಲ್‌ ನೆರವಾದರು. ಒಟ್ಟಾರೆ 23 ರೈಡಿಂಗ್‌ ಮಾಡಿದ ಪ್ರದೀಪ್‌ 16 ಅಂಕವನ್ನು ತಂಡಕ್ಕೆ ತಂದುಕೊಟ್ಟು ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಸಹ ಆಟಗಾರ ಮಂಜಿತ್‌ ಆಲ್‌ರೌಂಡರ್‌ ಆಟ ಪ್ರದರ್ಶಿಸಿದರು. ರೈಡಿಂಗ್‌ನಿಂದ 6 ಅಂಕವನ್ನು ತಂದುಕೊಟ್ಟ ಮಂಜಿತ್‌ 2 ಅಮೋಘ ಟ್ಯಾಕಲ್‌ ನಡೆಸಿ ಒಟ್ಟಾರೆ 8 ಅಂಕವನ್ನು ತಂಡಕ್ಕೆ ಸೇರಿಸಿಕೊಟ್ಟರು.

ನವೀನ್‌, ಚಂದ್ರನ್‌ ಆಟ ವ್ಯರ್ಥ: ದಬಾಂಗ್‌ ಡೆಲ್ಲಿ ತಂಡ ಗೆಲ್ಲಿಸಲು ರೈಡರ್‌ಗಳಾದ  ನವೀನ್‌ ಕುಮಾರ್‌ (16 ಅಂಕ) ಹಾಗೂ ಚಂದ್ರನ್‌ ರಂಜಿತ್‌ (6 ಅಂಕ) ಇನ್ನಿಲ್ಲದ ಕಸರತ್ತು ನಡೆಸಿದರು. ಇವರಿಗೆ ಆಲ್‌ರೌಂಡರ್‌ ರಾಜೇಶ್‌ ನರ್ವಾಲ್‌ (5 ಅಂಕ) ಉತ್ತಮ ಸಾಥ್‌ ನೀಡಿದರು. ಹೀಗಿದ್ದರೂ ತಂಡವನ್ನು ಗೆಲುವಿನ ದಡ ಸೇರಿಸುವ ಕನಸು ಕೈಗೂಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next