Advertisement

ಪ್ರೊ ಕಬಡ್ಡಿ: ಪಾಟ್ನಾಗೆ ಸೋಲಿನ ರುಚಿ ತೋರಿಸಿದ ಪುನೇರಿ  

12:59 PM Aug 21, 2017 | |

ಲಕ್ನೋ: ಪ್ರೊ ಕಬಡ್ಡಿ ಲೀಗ್‌ನ ಐದರಲ್ಲಿ ಯುಪಿ ಯೋಧಾ ತಂಡ ತವರಿನಲ್ಲಿ ಮತ್ತೆ ಎಡವಿದೆ. ಸತತ ಮೂರನೇ ಪಂದ್ಯದಲ್ಲಿ ಸೋತು ಆಘಾತಕ್ಕೆ ಒಳಗಾಗಿದೆ. ರವಿವಾರ ನಡೆದ ಪಂದ್ಯದಲ್ಲಿ ಯುಪಿ ತಂಡ ತೀವ್ರ ಹೋರಾಟ ನಡೆಸಿಯೂ ಜೈಪುರ ಪಿಂಕ್‌ ಪ್ಯಾಂಥರ್ ತಂಡದೆದುರು 22-24 ಅಂಕಗಳಿಂದ ಸೋಲನ್ನು ಕಂಡಿದೆ.

Advertisement

ಈ ಮೊದಲು ಭರ್ಜರಿ ಪ್ರದರ್ಶನ ನೀಡಿದ ಪುನೇರಿ ಪಲ್ಟಾನ್‌ ತಂಡವು ಪಾಟ್ನಾ ಪೈರೇಟ್ಸ್‌ಗೆ ಸೋಲಿನ ರುಚಿ ತೋರಿಸಿದೆ. ಪುನೇರಿ 47-42 ರಿಂದ ಜಯ ಸಾಧಿಸಿತು. ಈ ಮೂಲಕ ಕೂಟದಲ್ಲಿ ಪಾಟ್ನಾ ಮೊದಲ ಸೋಲಿನ ಆಘಾತ ಅನುಭವಿಸಿದೆ.

ಇಲ್ಲಿನ ಬಾಬು ಬನಾರಸಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪುನೇರಿ ಆರಂಭದಿಂದಲೇ ಭಾರೀ ಪ್ರದರ್ಶನ ನೀಡಿತು. ಬಲಾಡ್ಯ ಪಾಟ್ನಾ ತಂಡಕ್ಕೆ ಏಟು ನೀಡುತ್ತಾ ಸಾಗಿತು. ಇದರಿಂದಾಗಿ ಪಂದ್ಯ ಆರಂಭವಾಗಿ 10ನೇ ನಿಮಿಷದಲ್ಲಿ ಪುನೇರಿ 17-5 ರಿಂದ ಭಾರೀ ಮುನ್ನಡೆ ಪಡಿದಿತ್ತು.

ಅನಂತರ ಪಾಟ್ನಾ ಚೇತರಿಕೆಯ ಪ್ರದರ್ಶನ ನೀಡಿತು. ಆದರೂ ಪುನೇರಿ ತನ್ನ ಅಂಕವನ್ನು ಹೆಚ್ಚಿಸಿಕೊಳ್ಳುತ್ತ ಸಾಗಿತು. ಇದರಿಂದಾಗಿ ಮೊದಲ ಅವಧಿಯ ಅಂತ್ಯದಲ್ಲಿ ಪುನೇರಿ 25-13 ರಿಂದ ಮುನ್ನಡೆ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next