Advertisement

ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್‌ ವಿಜಯೋತ್ಸವ

10:49 PM Oct 31, 2022 | Team Udayavani |

ಪುಣೆ: ಗುಜರಾತ್‌ ಜೈಂಟ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌ ಪ್ರೊ ಕಬಡ್ಡಿ ಸೀಸನ್‌-9ರಲ್ಲಿ 3ನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಸೋಮವಾರದ ಮೊದಲ ಮುಖಾಮುಖೀಯಲ್ಲಿ ಅದು 34-28 ಅಂತರದಿಂದ ಗೆದ್ದು ಬಂದಿತು.

Advertisement

ರೈಡರ್‌ ಸಚಿನ್‌ (13 ಅಂಕ), ಆಲ್‌ರೌಂಡರ್‌ ರೋಹಿತ್‌ ಗುಲಿಯ (7 ಅಂಕ) ಪಾಟ್ನಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಪರಾಜಿತ ಗುಜರಾತ್‌ ಪರ ಆಲ್‌ರೌಂಡರ್‌ ಪ್ರತೀಕ್‌ ದಹಿಯಾ (11 ಅಂಕ), ರೈಡರ್‌ ಮಹೇಂದ್ರ ರಜಪೂತ್‌ (9 ಅಂಕ) ಉತ್ತಮ ಹೋರಾಟ ಸಂಘಟಿಸಿದರೂ ಉಳಿದವರ ಹಿನ್ನಡೆ ತಂಡಕ್ಕೆ ಮುಳುವಾಯಿತು. ಇದು 9 ಪಂದ್ಯಗಳಲ್ಲಿ ಗುಜರಾತ್‌ಗೆ ಎದುರಾದ 5ನೇ ಸೋಲು.

ಯೋಧಾಸ್‌ ಜಯಭೇರಿ
ಅಂಕಪಟ್ಟಿಯ ತಳದಲ್ಲಿರುವ ತಂಡಗಳೆರಡರ ಮತ್ತೊಂದು ಸೆಣಸಾಟದಲ್ಲಿ ಯುಪಿ ಯೋಧಾಸ್‌ 43-24 ಅಂಕಗಳ ಭಾರೀ ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿತು. ಟೈಟಾನ್ಸ್‌ 9 ಪಂದ್ಯಗಳಲ್ಲಿ ಅನುಭವಿಸಿದ 8ನೇ ಸೋಲು ಇದಾಗಿದೆ. ಯೋಧಾಸ್‌ 8 ಪಂದ್ಯಗಳಿಂದ 4ನೇ ಜಯ ಸಾಧಿಸಿತು. 13 ಅಂಕ ಗಳಿಸಿದ ರೈಡರ್‌ ಸುರೇಂದರ್‌ ಗಿಲ್‌ ಯೋಧಾಸ್‌ ಹೀರೋ ಎನಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next