Advertisement

Pro Kabaddi ಪಾಟ್ನಾ ಪೈರೇಟ್ಸ್‌ – ಪುನೇರಿ ಪಲ್ಟಾನ್‌ ಪಂದ್ಯ ಸಮಬಲ- ಅಗ್ರಸ್ಥಾನಕ್ಕೆ ಪುನೇರಿ

11:55 PM Jan 27, 2024 | Team Udayavani |

ಪಾಟ್ನಾ: ಆತಿಥೇಯ ಪಾಟ್ನಾ ಪೈರೇಟ್ಸ್‌ ಮತ್ತು ಪುನೇರಿ ಪಲ್ಟಾನ್‌ ನಡುವಿನ ಶನಿವಾರದ ಪ್ರೊ ಕಬಡ್ಡಿ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಎರಡೂ ತಂಡಗಳು 32 ಅಂಕ ಗಳಿಸಿದವು.
ಇದರೊಂದಿಗೆ ಪುನೇರಿ ಪಲ್ಟಾನ್‌ 63 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿತು. ಜೈಪುರ್‌ ಪಿಂಕ್‌ ಪ್ಯಾಂಥರ್ ಕೂಡ 63 ಅಂಕ ಹೊಂದಿದ್ದು, ದ್ವಿತೀಯ ಸ್ಥಾನಿಯಾಗಿದೆ.

Advertisement

ಎರಡೂ ತಂಡಗಳಲ್ಲಿ ನಾಯಕರ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ಪುನೇರಿ ಕಪ್ತಾನ ಅಸ್ಲಾಮ್‌ ಮುಸ್ತಾಫಾ 13, ಪಾಟ್ನಾ ಕ್ಯಾಪ್ಟನ್‌ ಸಚಿನ್‌ 9 ಅಂಕ ಗಳಿಸಿಕೊಟ್ಟರು.
ದಿನದ 2ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 36-27 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಇದು ಡೆಲ್ಲಿಗೆ ಒಲಿದ 10ನೇ ಜಯ.

Advertisement

Udayavani is now on Telegram. Click here to join our channel and stay updated with the latest news.

Next