Advertisement

Pro Kabaddi: ಇಂದಿನಿಂದ ಮುಂಬಯಿಯಲ್ಲಿ ಪಂದ್ಯಗಳು

12:29 AM Jan 05, 2024 | Team Udayavani |

ಮುಂಬಯಿ: ಪ್ರೊ ಕಬಡ್ಡಿ 10ನೇ ಆವೃತ್ತಿಯ ಮುಂಬಯಿ ಚರಣದ ಪಂದ್ಯಗಳು ಶುಕ್ರವಾರದಿಂದ ಇಲ್ಲಿನ ನ್ಯಾಶನಲ್‌ ನ್ಪೋರ್ಟ್ಸ್ ಕ್ಲಬ್‌ ಆಫ್ ಇಂಡಿಯಾದ ತಾಣದಲ್ಲಿ ನಡೆಯಲಿವೆ.

Advertisement

ಇಷ್ಟರವರೆಗೆ ಕೇವಲ ಏಳು ಪಂದ್ಯಗಳನ್ನು ಆಡಿರುವ ಯು ಮುಂಬಾ ತಂಡವು ತವರಿನ ತಾಣದ ಪೂರ್ಣ ಲಾಭ ಪಡೆದು ಗರಿಷ್ಠ ಪಂದ್ಯಗಳಲ್ಲಿ ಜಯ ಸಾಧಿಸುವ ವಿಶ್ವಾಸದಲ್ಲಿದೆ. ಈಗಾಗಲೇ ಐದು ಪಂದ್ಯಗಳಲ್ಲಿ ಗೆದ್ದು 26 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿರುವ ಯು ಮುಂಬಾ ತಂಡವು ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿದೆ. ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವು ದಬಾಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವು ಬೆಂಗಳೂರು ಬುಲ್ಸ್‌ ಸವಾಲನ್ನು ಎದುರಿಸಲಿದೆ.

ಅಮೋಘ ಪ್ರದರ್ಶನ ನೀಡುತ್ತಿರುವ ಪುನೇರಿ ಪಲ್ಟಾನ್ಸ್‌ ಆಡಿರುವ 9 ಪಂದ್ಯಗಳಲ್ಲಿ ಎಂಟರಲ್ಲಿ ಜಯ ಸಾಧಿಸಿದ್ದು ಒಂದು ಪಂದ್ಯದಲ್ಲಿ ಸೋತಿದೆ. ಒಟ್ಟಾರೆ 41 ಅಕ ಹೊಂದಿರುವ ಪುನೇರಿ ಅಂಕಪಟ್ಟಿ ಯಲ್ಲಿ ಅಗ್ರಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿರುವ ಗುಜರಾತ್‌ ಜೈಂಟ್ಸ್‌ ತಂಡವು 10 ಪಂದ್ಯ ಆಡಿದ್ದು ಆರು ಗೆಲುವಿನೊಂದಿಗೆ 34 ಅಂಕ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next