Advertisement
ತಮ್ಮ ಅಧಿಕೃತ ಹ್ಯಾಂಡಲ್ @bengalurubullsofficial ನಿಂದ ಕೂ ಮಾಡಿದ್ದು, ತಂಡವು ತಮ್ಮ ಸ್ಟಾರ್ ಆಟಗಾರರೊಬ್ಬರು ತೂಕ ಎತ್ತುವ ವೀಡಿಯೊವನ್ನು ಹಂಚಿಕೊಂಡಿದೆ. ಲೀಗ್ ನ ಎಂಟನೇ ಸೀಸನ್ಗೆ ಬೆಂಗಳೂರು ಬುಲ್ಸ್ ಆಟಗಾರರು ಸಜ್ಜಾಗುತ್ತಿದ್ದು, ಇದೇ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.
ವೃತ್ತಿಪರತೆಯ ಹೊಸ ಹಂತಗಳನ್ನು ಒಳಗೊಳ್ಳುವ ಹಾಗೂ ಉದಯೋನ್ಮುಖ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಮಹತ್ವಾಕಾಂಕ್ಷೆ ರೂಪಿಸುವ ಮೂಲಕ ಪ್ರೊ ಕಬಡ್ಡಿ ಲೀಗ್ ಸ್ಥಳೀಯ ಆಟವಾದ ಕಬಡ್ಡಿಗೆ ಹೆಚ್ಚು ಆಕರ್ಷಣೆಯನ್ನು ತಂದಿದೆ. ಇತ್ತೀಚೆಗೆ, ಯು ಮುಂಬಾ, ಯುಪಿ ಯೋದ್ಧ, ಪುಣೇರಿ ಪಲ್ಟನ್, ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ನಂತಹ ಇತರ ಪ್ರೊ ಕಬಡ್ಡಿ ಲೀಗ್ ತಂಡಗಳು ಕೂಡ ‘ಕೂ’ಗೆ ಸೇರಿವೆ. ಈ ಜನಪ್ರಿಯ ತಂಡಗಳ ಉಪಸ್ಥಿತಿಯು ಸ್ವಯಂ ಅಭಿವ್ಯಕ್ತಿ ವೇದಿಕೆಯಾದ ‘ಕೂ’ ನಲ್ಲಿ ತೀವ್ರ ಚಟುವಟಿಕೆಯನ್ನು ಸೃಷ್ಟಿಸಲಿದೆ ಮತ್ತು ಬಳಕೆದಾರರಿಗೆ ಕ್ರೀಡಾ ತಲ್ಲೀನತೆ ಅನುಭವವನ್ನು ನೀಡುತ್ತದೆ.Koo AppRelated Articles