Advertisement

ಪಾಟ್ನಾ ಪೈರೇಟ್ಸ್‌ಗೆ ಸೋಲಿನ ಆಘಾತ

06:50 AM Oct 15, 2017 | Team Udayavani |

ಪುಣೆ: ನಾಯಕ ಅಜಯ್‌ ಠಾಕುರ್‌ ಮತ್ತು ಪ್ರಪಂಜನ್‌ ಅವರ ಭರ್ಜರಿ ರೈಡ್‌ನ‌ ಲಾಭ ಪಡೆದ ತಮಿಳ್‌ ತಲೈವಾಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪುಣೆ ಚರಣದ ಶನಿವಾರದ ಪಂದ್ಯದಲ್ಲಿ “ಬಿ ವಲಯದ ದ್ವಿತೀಯ ಸ್ಥಾನಿ ಪಾಟ್ನಾ ಪೈರೇಟ್ಸ್‌ ತಂಡವನ್ನು 40-37 ಅಂಕಗಳಿಂದ ಸೋಲಿಸಿ ಆಘಾತಗೊಳಿಸಿತು.

Advertisement

ಇದು ತಮಿಳ್‌ ತಲೈವಾಸ್‌ಗೆ ಪ್ರೊ ಕಬಡ್ಡಿ ಲೀಗ್‌ ಐದರಲ್ಲಿನ ಅಂತಿಮ ಪಂದ್ಯವಾಗಿತ್ತು. ರೋಚಕ ಗೆಲುವಿನ ಮೂಲಕ ತಮಿಳ್‌ ಕೂಟದಿಂದ ನಿರ್ಗಮಿಸಿತು. ಆಡಿದ 22 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿರುವ ತಮಿಳ್‌ ಒಟ್ಟಾರೆ 46 ಅಂಕಗಳೊಂದಿಗೆ ಸದ್ಯ ಐದನೇ ಸ್ಥಾನದಲ್ಲಿದೆ.

ಪಾಟ್ನಾ ವಿರುದ್ಧದ ಈ ಪಂದ್ಯದಲ್ಲಿ ತಮಿಳ್‌ ಭರ್ಜರಿ ಆಟ ಪ್ರದರ್ಶಿಸಿತು. ಪಾಟ್ನಾದ ಪ್ರದೀಪ್‌ ನರ್ವಾಲ್‌ ರೈಡ್‌ ಮೂಲಕ ಅಮೋಘ ಪ್ರದರ್ಶನ ನೀಡಿದರೂ ಇತರ ಆಟಗಾರರು ಅವರಿಗೆ ಸಮರ್ಥ ಬೆಂಬಲ ನೀಡಲು ವಿಫ‌ಲರಾದರು. ಎರಡು ಬಾರಿ ಅಲೌಟ್‌ಗೆ ಗುರಿಯಾದ ಪಾಟ್ನಾ ಅಂತಿಮವಾಗಿ ಶರಣಾಯಿತು. ಪ್ರದೀಪ್‌ 20 ರೈಡ್‌ ಅಂಕ ಗಳಿಸಿದರೆ ಮೊನು ಗೊಯಟ್‌ 7 ಮತ್ತು ಜವಾಹರ್‌ ದಗಾರ್‌ 4 ಅಂಕ ಗಳಿಸಿದರು.

ವಿಜಯಿ ತಮಿಳ್‌ ಪರ ನಾಯಕ ಅಜಯ್‌ 14 ಅಂಕ ಗಳಿಸಿದರೆ ಪ್ರಪಂಜನ್‌ 11 ಮತ್ತು ಅಮಿತ್‌ ಹೂಡ 4 ಅಂಕ ಪಡೆದರು.
ಪಾಟ್ನಾ ತನ್ನ ಅಂತಿಮ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next