Advertisement

ಅ. 7ರಿಂದ 9ನೇ ಪ್ರೊ ಕಬಡ್ಡಿ ಲೀಗ್‌; ಬೆಂಗಳೂರು, ಹೈದರಾಬಾದ್‌, ಪುಣೆಯಲ್ಲಿ ಲೀಗ್‌ ಪಂದ್ಯ

06:08 PM Aug 26, 2022 | Team Udayavani |

ಹೊಸದಿಲ್ಲಿ: ಪ್ರೊ ಕಬಡ್ಡಿ 9ನೇ ಆವೃತ್ತಿ ಅಕ್ಟೋಬರ್‌ 7ರಂದು ಆರಂಭವಾಗಲಿದೆ ಎಂದು ಕೂಟದ ಮುಖ್ಯಸ್ಥ ಅನುಪಮ್‌ ಗೋಸ್ವಾಮಿ ತಿಳಿಸಿದ್ದಾರೆ. ಇದು ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ.

Advertisement

ಕೂಟ ಡಿಸೆಂಬರ್‌ ನಡು ಅವಧಿಯ ತನಕ ನಡೆಯಲಿದೆ. ಲೀಗ್‌ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಗೋಸ್ವಾಮಿ ಮಾಹಿತಿ ನೀಡಿದ್ದಾರೆ.

ಸಮಕಾಲೀನ ಮತ್ತು ಭವಿಷ್ಯದ ಕಬಡ್ಡಿ ಅಭಿಮಾನಿಗಳನ್ನು ಗಮನದಲ್ಲಿರಿಸಿ “ಮಶಾಲ್‌ ನ್ಪೋರ್ಟ್‌ ವಿವೋ ಪ್ರೊ ಕಬಡ್ಡಿ ಲೀಗ್‌’ ಅನ್ನು ಆಯೋಜಿಸಲಾಗುವುದು. ಕಳೆದ ಸಲ ಕೊರೊನಾ ಕಾರಣದಿಂದ ಬಯೋಬಬಲ್‌ ಏರಿಯಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿದ್ದವು. ಆದರೆ ಈ ಬಾರಿ ಕಬಡ್ಡಿ ಲೀಗ್‌ ವ್ಯಾಪ್ತಿ ದೇಶದ ಪ್ರಮುಖ ನಗರಗಳಿಗೆ ವಿಸ್ತಾರಗೊಳ್ಳಲಿದೆ. ಸಂಪೂರ್ಣ ವೇಳಾಪಟ್ಟಿ ಹಾಗೂ ನಾಕೌಟ್‌ ಪಂದ್ಯಗಳ ತಾಣ ಶೀಘ್ರವೇ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ :ಗೃಹಸಚಿವ ಆರಗ ವಿರುದ್ಧ ಲೋಕಾಯುಕ್ತದಲ್ಲಿ ದೂರು: ರಾಜೀನಾಮೆಗೆ ಎಎಪಿ ಆಗ್ರಹ

Advertisement

ಪವನ್‌ಗೆ ಎರಡು ಕೋಟಿ!
9ನೇ ಪ್ರೊ ಕಬಡ್ಡಿ ಲೀಗ್‌ಗಾಗಿ ಆಗಸ್ಟ್‌ ಮೊದಲ ವಾರ ಹರಾಜು ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಸ್ಟಾರ್‌ ಆಟಗಾರ ಪವನ್‌ ಸೆಹ್ರಾವತ್‌ ಅವರನ್ನು ದಾಖಲೆ 2.26 ಕೋಟಿ ರೂ.ಗೆ ತಮಿಳ್‌ ತಲೈವಾಸ್‌ ಖರೀದಿಸಿತ್ತು. ಸೆಹ್ರಾವತ್‌ ಇಲ್ಲಿಯ ತನಕ ಬೆಂಗಳೂರು ಬುಲ್ಸ್‌ ತಂಡದಲ್ಲಿದ್ದರು.

ಪ್ರೊ ಕಬಡ್ಡಿ ಹರಾಜಿನಲ್ಲಿ ಆಟಗಾರನೊಬ್ಬನ ಮೌಲ್ಯ ಎರಡು ಕೋಟಿ ರೂ.ಗಳ ಗಡಿ ದಾಟಿದ್ದು ಇದೇ ಮೊದಲು. ಹಿಂದಿನ ದಾಖಲೆ ಪರ್ದೀಪ್ ನರ್ವಾಲ್‌ ಹೆಸರಲ್ಲಿತ್ತು. ಅವರು 1.65 ಕೋಟಿ ರೂ. ಮೊತ್ತಕ್ಕೆ ಯುಪಿ ಯೋಧ ತಂಡದ ಪಾಲಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next