Advertisement
ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ದೀಪಕ್ ಹೂಡಾ (11 ಅಂಕ), ನಿತಿನ್ ರಾವಲ್ (7 ಅಂಕ) ಹಾಗೂ ದೀಪಕ್ ನರ್ವಲ್ (6 ಅಂಕ) ರೈಡಿಂಗ್‌ನಿಂದ ಜೈಪುರ ಬಿರುಗಾಳಿಯ ಆಟ ಪ್ರದರ್ಶಿಸಿತು. ಜತೆಗೆ ಅಮಿತ್ ಹೂಡಾ ಅತ್ಯುತ್ತಮ ಟ್ಯಾಕಲ್‌ನಿಂದ ತಂಡ ಗೆಲುವು ಸಾಧಿಸುವಂತಾಯಿತು.
ಯು ಮುಂಬಾದ ಬಲಿಷ್ಠ ಕೋಟೆಯೊಳಗೆ ನುಗ್ಗಿದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮೊದಲ ಅವಧಿಯಲ್ಲಿಯೇ ಮಿಂಚಿನ ಆಟವಾಡಿತು. ಅತ್ಯಂತ ಸುಲಭವಾಗಿ ಅಂಕಗಳನ್ನು ಕಲೆಹಾಕುತ್ತ ಸಾಗಿತು. ಯು ಮುಂಬಾದ ಪ್ರಮುಖ ರೈಡರ್ ಅಭಿಷೇಕ್ ಸಿಂಗ್ ಅವರಿಗೆ ಮೊದಲ ಪಂದ್ಯದಲ್ಲಿ ಟೈಟಾನ್ಸ್ ವಿರುದ್ಧ ತೋರಿದ್ದ ಸಾಹಸವನ್ನು ಇಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮೊದಲ ಅವಧಿಯಲ್ಲಿ ಮುಂಬೈ ತಂಡವನ್ನು ಜೈಪುರ್ ಡಿಫೆಂಡರ್ ಅಮಿತ್ ಹೂಡಾ ಸಂಪೂರ್ಣವಾಗಿ ನಿಯಂತ್ರಿಸಿದ್ದರು. ಇವರಿಗೆ ವಿಶಾಲ್ ಸಾಥ್ ನೀಡಿದರು. ಹೀಗಾಗಿ ಯು ಮುಂಬಾ ತಂಡ ಒಂದೊಂದು ಅಂಕ ಗಳಿಸಲೂ ತೀವ್ರ ಪರದಾಟ ನಡೆಸಿತು. ಈ ಅವಧಿಯಲ್ಲಿ ಜೈಪುರ್ ರೈಡರ್ ದೀಪಕ್ ನಿವಾಸ್ ಹೂಡಾ ಪ್ರಚಂಡ ಪ್ರದರ್ಶನ ನೀಡಿದರು. ನಿತಿನ್ ರಾವಲ್, ದೀಪಕ್ ನರ್ವಾಲ್ ಕೂಡ ಇವರಿಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ಜೈಪುರ್ ಮೊದಲ ಅವಧಿಯಲ್ಲೇ 22-9 ಅಂತರದ ಭಾರೀ ಮುನ್ನಡೆ ಪಡೆದು ಸ್ಪಷ್ಟ ಮೇಲುಗೈ ಸಾಧಿಸಿತ್ತು.
Related Articles
ಎರಡನೇ ಅವಧಿಯಲ್ಲಿ ಮುಂಬೈ ಸ್ವಲ್ಪ ಚೇತರಿಸಿಕೊಂಡು ಆಡಿತು. ತಪ್ಪು ಗಳನ್ನು ಸರಿಪಡಿಸಿಕೊಂಡು ಆಡುವತ್ತ ಗಮನ ವಹಿಸಿತು. ಅಭಿಷೇಕ್ ಸಿಂಗ್, ಡಾಂಗ್ ಲೀ ರೈಡಿಂಗ್‌ನಲ್ಲಿ ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರುವ ಪ್ರಯತ್ನ ನಡೆಸಿದರು. ಸುರೀಂದರ್ ಸಿಂಗ್ ಟ್ಯಾಕಲ್‌ನಿಂದ ಗಮನ ಸೆಳೆದರು. ಆದರೆ ಮತ್ತೂಂದು ತುದಿಯಲ್ಲಿದ್ದ ಜೈಪುರ್ ಆಟಗಾರರು ಯು ಮುಂಬಾ ಮೇಲೆ ಒತ್ತಡವನ್ನು ಹೆಚ್ಚಿಸುತ್ತಲೇ ಹೋದರು. ಹೀಗಾಗಿ ಮುಂಬಾಗೆ ದೊಡ್ಡ ಮಟ್ಟದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
Advertisement
ಕೈಕೊಟ್ಟ ಸ್ಟಾರ್ ಆಟಗಾರರುಯು ಮುಂಬಾದ ಡಿಫೆಂಡರ್‌ಗಳಾದ ಫಜಲ್ ಅಟ್ರಾಚಲಿ (2 ಅಂಕ), ರೋಹಿತ್ ಬಲಿಯಾನ್ (1 ಅಂಕ) ಹಾಗೂ ಸಂದೀಪ್ ನರ್ವಲ್ (1 ಅಂಕ) ಸೂಕ್ತ ಸಮಯದಲ್ಲಿ ಎದುರಾಳಿ ರೈಡರ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಯು ಮುಂಬಾ ಮುಗ್ಗರಿಸುತ್ತಲೇ ಹೋಯಿತು.