Advertisement

ಪ್ರೊ ಕಬಡ್ಡಿ ಲೀಗ್‌: ಪುನೇರಿ ಪಲ್ಟಾನ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ಗೆ ಭರ್ಜರಿ ಜಯ

11:02 PM Oct 18, 2022 | Team Udayavani |

ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬಂಗಾಲ ವಾರಿಯರ್ಸ್‌ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು 39-24 ಅಂಕಗಳ ಅಂತರದಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ.

Advertisement

ಮೊದಲ 10 ನಿಮಿಷಗಳ ಕಾಲ ಎರಡು ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಪಂದ್ಯದ 15ನೇ ನಿಮಿಷದ ವೇಳೆಗೆ ಪಂದ್ಯದ ದಿಕ್ಕು ಬದಲಾಯಿತು. ಅನಂತರದಲ್ಲಿ ಬಂಗಾಲ ವಾರಿಯರ್ಸ್‌ಗೆ ಮುನ್ನಡೆ ಸಿಗಲೇ ಇಲ್ಲ. ಜೈಪುರ ಪ್ಯಾಂಥರ್ಸ್‌ ಪರ ಅರ್ಜುನ್‌ ದೇಶ್ವಾಲ್‌ 10, ಅಂಕುಶ್‌ ಮತ್ತು ಭವಾನಿ ರಾಜಪೂತ್‌ ತಲಾ 5 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಈ ಪಂದ್ಯದಲ್ಲಿ ಜೈಪುರ ರೈಡ್‌ ಮೂಲಕ 11, ಟ್ಯಾಕಲ್‌ ಮೂಲಕ 6 ಅಂಕ ಗಳಿಸಿತು.

ಪುನೇರಿಗೆ ರೋಚಕ ಗೆಲುವು
ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡದ ವಿರುದ್ಧ ಪುನೇರಿ ಪಲ್ಟಾನ್‌ 26-25 ಅಂಕಗಳ ರೋಚಕ ಗೆಲುವು ಸಾಧಿಸಿದೆ. ಪಂದ್ಯದ ಆರಂಭದಿಂದಲೂ ಎರಡೂ ತಂಡಗಳೂ ತೀವ್ರವಾಗಿ ಕಾದಾಡಿದವು. 20ನೇ ನಿಮಿಷದಲ್ಲಿ ಎರಡು ತಂಡಗಳು ಹೆಚ್ಚು ಕಡಿಮೆ ಸಮಬಲ ಸಾಧಿಸಿದ್ದವು. ಕೊನೆಯಲ್ಲಿ ಕೇವಲ ಒಂದೇ ಒಂದು ಪಾಯಿಂಟ್‌ ಅಂತರದಲ್ಲಿ ಪುನೇರಿ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next