Advertisement
ಈ ಬಾರಿಯ ಹರಾಜಿನಲ್ಲಿ 601 ಆಟಗಾರರು ಭಾಗವಹಿಸಿದ್ದರು. ಸೆಹ್ರಾ ವತ್ ಅವರನ್ನು ಖರೀದಿಸಲು ಹರಿ ಯಾಣ ಸ್ಟೀಲರ್, ಯುಪಿ ಯೋಧಾಸ್, ತೆಲುಗು ಮತ್ತು ಬೆಂಗಳೂರು ಬುಲ್ಸ್ ಫ್ರಾಂಚೈಸಿ ತೀವ್ರ ಪೈಪೋಟಿ ನಡೆಸಿತು. ಅಂತಿಮವಾಗಿ ಸೆಹ್ರಾವತ್ ತೆಲುಗು ಟೈಟಾನ್ಸ್ ಪಾಲಾದರು. ಸೆಹ್ರಾವತ್ ಅವರನ್ನು ಕಳೆದ ಋತುವಿನಲ್ಲಿ ದಾಖಲೆ 2.26 ಕೋಟಿ ರೂ.ಗಳಿಗೆ ತಮಿಳ್ ತಲೈವಾಸ್ ಖರೀದಿಸಿತ್ತು.
ಎರಡು ದಿನಗಳ ಹರಾಜಿನ ಮೊದಲ ದಿನ “ಎ’ ಮತ್ತು “ಬಿ’ ವಿಭಾಗದ ಆಟ ಗಾರರ ಹರಾಜು ನಡೆದಿತ್ತು. ಸೆಹ್ರಾವತ್ ದಾಖಲೆಯ ಮೊತ್ತಕ್ಕೆ ಹರಾಜು ಆಗುವ ಮೊದಲು ಇನ್ನೂ ಕೆಲವರು ಆಟಗಾರರಿಗೆ ಭಾರೀ ಬೇಡಿಕೆ ಬಂದಿತ್ತು. ಎರಡು ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟಗೊಂಡರು. ಇರಾನಿನ ಮೊಹಮ್ಮದ್‌ರೆಝ ಶಡ್ಲೂಯಿ ಚಿನನೇಹ್ ಅವರನ್ನು ಪುನೇರಿ ಪಲ್ಟಾನ್ಸ್ 2.35 ಕೋಟಿ ರೂ.ಗಳಿಗೆ ಖರೀದಿಸಿದರೆ, ಭಾರತದ ಮಣೀಂದರ್ ಸಿಂಗ್ ಅವರನ್ನು 2.12 ಕೋಟಿ ರೂ. ನೀಡಿ ಬಂಗಾಲ್ ವಾರಿಯರ್ ಖರೀದಿಸಿತು. ಗುಜರಾತ್ ಜೈಂಟ್ಸ್ ಇರಾನಿನ ಸ್ಟಾರ್ ಆಟಗಾರ ಫಜಲ್ ಅತ್ರಾಚಲಿ ಅವರನ್ನು 1.60 ಕೋಟಿ ರೂ.ಗಳಗೆ ತನ್ನದಾಗಿಸಿಕೊಂಡಿತು.
Related Articles
Advertisement
ಸಂದೀಪ್ ನರ್ವಾಲ್, ದೀಪಕ್ ನಿವಾಸ್ ಹೂಡ, ಆಶಿಷ್, ಮನೋಜ್ ಗೌಡ, ಸಚಿನ್ ನರ್ವಾಲ್, ಗುರುದೀಪ್, ಅಜಿಂಕ್ಯ ಕಪ್ರ, ವಿಶಾಲ್ ಭಾರಧ್ವಾಜ್ ಅವರನ್ನು ಯಾರೂ ಬಿಡ್ ಮಾಡಲಿಲ್ಲ.