Advertisement
ಪಾಟ್ನಾ ಎಲ್ಲ ವಿಭಾಗದಲ್ಲಿಯೂ ಸರ್ವಾಂಗೀಣ ಪ್ರದರ್ಶನ ತೋರಿತು. ಸಚಿನ್ ರೈಡಿಂಗ್‌ನಲ್ಲಿ ಒಟ್ಟು 10 ಟಚ್ ಪಾಯಿಂಟ್‌ಗಳನ್ನು ಗಳಿಸಿದರೆ ನಾಯಕ ಪ್ರಶಾಂತ್ ಕುಮಾರ್ (5), ಮತೋರ್ವ ತಾರ ರೇಡರ್ ಮೋನು ಗೋಯತ್ (3) ಅಂಕ ಕಲೆಹಾಕಿದರು. ಡಿಫೆಂಡಿಂಗ್‌ನಲ್ಲಿ ಸುನೀಲ್ 4 ಬಾರಿ ಎದುರಾಳಿಗಳನ್ನು ಕೆಡವಿದರು ಈ ವೇಳೆ ಅವರು ಯಲ್ಲೋ ಮತ್ತು ಗ್ರೀನ್ ಕಾರ್ಡ್ ಪಡೆದರು. ಉಳಿದಂತೆ ಪನೇರಿ ಪರ ಅಸ್ಲಾಮ್ ಇನಾಮ್‌ದಾರ್ (6), ಸೋಮ್‌ಬೀರ್ (5) ಅಂಕ ಗಳಿಸಿದರು. ಉಳಿದ ಆಟಗಾರರ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು.
ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 39-37 ಅಂತರದಿಂದ ಗೆದ್ದ ಹರಿಯಾಣ ಸ್ಟೀಲರ್ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು.