Advertisement
ಈ ಪಂದ್ಯದಲ್ಲಿ ರೋಹಿತ್ ಕುಮಾರ್ ಅವರದೇ ಗರ್ಜನೆ. ಬೆಂಗಳೂರು ಗಳಿಸಿದ 64 ಅಂಕದಲ್ಲಿ ಅರ್ಧದಷ್ಟು ಅಂದರೆ 32 ಅಂಕ ರೋಹಿತ್ ಅವರದೇ ಆಗಿದೆ. ಈ ಮೂಲಕ ರೋಹಿತ್ ಯುಪಿ ತಂಡದ ರಿಷಾಂಕ್ ದೇವಾಡಿಗ ಜೈಪುರ ವಿರುದ್ಧ ನಿರ್ಮಿಸಿದ್ದ ಪಂದ್ಯವೊಂದರ ಗರಿಷ್ಠ 28 ಅಂಕಗಳ ದಾಖಲೆಯನ್ನು ಅಳಿಸಿ ಹಾಕಿದರು.
ಪಂದ್ಯದ ಆರಂಭದಿಂದಲೇ ಬುಲ್ಸ್ ಭಾರೀ ಹೋರಾಟ ಪ್ರದರ್ಶಿಸಿತು. ಹಂತ ಹಂತವಾಗಿ ಅಂಕ ಗಳಿಕೆಯಲ್ಲಿ ಭಾರೀ ಅಂತರವನ್ನು ಪಡೆಯುತ್ತ¤ ಸಾಗಿತು. ಅತ್ತ ಯೋಧಾ ತಂಡ ವೈಫಲ್ಯಕ್ಕೆ ತುತ್ತಾಗಿತ್ತು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಬುಲ್ಸ್ 27-10ರಿಂದ ಮುನ್ನಡೆ ಪಡೆದಿತ್ತು. ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿದ್ದರಿಂದ ಯುಪಿ ಯೋಧಾ ತಂಡ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತ್ತು.
Related Articles
Advertisement
ಈ ಗೆಲುವಿನ ಮೂಲಕ ಬೆಂಗಳೂರು ತಂಡ 21 ಪಂದ್ಯಗಳಿಂದ 8 ಜಯ, 11 ಸೋಲು, 2 ಟೈ ಸಹಿತ ಒಟ್ಟು 54 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೆ ಜಿಗಿದಿದೆ. ಅತ್ತ ಯೋಧಾ ತಂಡ 22 ಪಂದ್ಯಗಳಿಂದ 8 ಜಯ, 10 ಸೋಲು, 4 ಟೈ ಸಹಿತ ಒಟ್ಟು 60 ಅಂಕ ಸಂಪಾದಿಸಿ “ಬಿ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಲೀಗ್‌ನಲ್ಲಿ ಬೆಂಗಳೂರಿಗೆ ಇನ್ನು ಪಾಟ್ನಾ ವಿರುದ್ಧದ ಒಂದು ಪಂದ್ಯ ಮಾತ್ರ ಬಾಕಿ ಇದೆ.ಪಂದ್ಯದಲ್ಲಿ ರೋಹಿತ್ ಕುಮಾರ್ 31 ರೈಡಿಂಗ್‌ನಿಂದ 30 ಅಂಕ ಸಂಪಾದಿಸಿದ್ದಾರೆ. ಅದರಲ್ಲಿ 25 ಟಚ್ ಪಾಯಿಂಟ್, 5 ಬೋನಸ್ ಅಂಕಗಳು. ಇನ್ನು ಕ್ಯಾಚಿಂಗ್‌ನಿಂದ ರೋಹಿತ್ 2 ಅಂಕ ಗಳಿಸಿದ್ದಾರೆ. ಒಟ್ಟಾರೆ ಅವರ ಗಳಿಕೆ 32 ಅಂಕಗಳಾಗಿವೆ. ಇಂದಿನ ಪಂದ್ಯಗಳು
ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ಸುವರ್ಣ ಪ್ಲಸ್ ಬೆಂಗಳೂರು ಬುಲ್ಸ್-
ಪಾಟ್ನಾ ಪೈರೇಟ್ಸ್
ಆರಂಭ: ರಾತ್ರಿ 8.00 ಪುನೇರಿ ಪಲ್ಟಾನ್ಸ್-
ಜೈಪುರ ಪ್ಯಾಂಥರ್
ಆರಂಭ: ರಾತ್ರಿ 9.00