Advertisement

ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್‌ಗೆ ಮತ್ತೆ ಸೋಲು

06:10 AM Sep 07, 2017 | Team Udayavani |

ಕೋಲ್ಕತಾ: ಪ್ರೊ ಕಬಡ್ಡಿ ಲೀಗ್‌ನ ಕೋಲ್ಕತಾ ಚರಣದಲ್ಲಿ ಆತಿಥೇಯ ಬೆಂಗಾಲ್‌ ವಾರಿಯರ್ ಮತ್ತೆ ಸೋಲನ್ನು ಕಂಡಿದೆ. ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ ತಂಡವು ಯು ಮುಂಬಾ ತಂಡದೆದುರು 31-37 ಅಂಕಗಳಿಂದ ಶರಣಾಗಿದೆ.

Advertisement

ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಾಲ್‌ ತಂಡವು ಹರಿಯಾಣ ಸ್ಟೀಲರ್ ತಂಡದೆದುರು ಸೋಲನ್ನು ಕಂಡಿದೆ. ಕೋಲ್ಕತಾ ಚರಣ ಗುರುವಾರಕ್ಕೆ ಮುಗಿಯಲಿದೆ. ಗುರುವಾರದ ಅಂತಿಮ ಪಂದ್ಯದಲ್ಲಿ ಬೆಂಗಾಲ್‌ ತಂಡವು ದಬಾಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ. ದಿನದ ಇನ್ನೊಂದು ಪಂದ್ಯವು ತೆಲುಗು ಟೈಟಾನ್ಸ್‌ ಮತ್ತು ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡಗಳ ನಡುವೆ ನಡೆಯಲಿದೆ.

ಬುಧವಾರ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡವು ಬೆಂಗಳೂರು ವಲಯ ತಂಡವನ್ನು 38-30 ಅಂಕಗಳಿಂದ ಕೆಡಹಿದೆ. ಇದು ಅಂತರ್‌ ವಲಯಗಳ ನಡುವಣ ಪಂದ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next