Advertisement

Pro Kabaddi: ಜೈಪುರ ಗೆಲುವಿನ ದಾಖಲೆ: ಹೊರ ಬಿದ್ದ ಯೋಧಾಸ್‌

11:14 PM Feb 12, 2024 | Team Udayavani |

ಕೋಲ್ಕತಾ: ಪ್ರೊ ಕಬಡ್ಡಿ ಇತಿಹಾಸದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ ದಾಖಲೆ ಅಂತರದ ಗೆಲುವಿನೊಂದಿಗೆ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ (82 ಅಂಕ). ಸೋಮವಾರದ ಮುಖಾಮುಖಿಯಲ್ಲಿ ಜೈಪುರ್‌ 67-30 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಇದರೊಂದಿಗೆ ಯೋಧಾಸ್‌ ಕೂಟದಿಂದ ಅಧಿಕೃತವಾಗಿ ಹೊರಬಿತ್ತು. ಪ್ರೊ ಕಬಡ್ಡಿ ಇತಿಹಾಸದಲ್ಲಿ ಯುಪಿ ಯೋಧಾಸ್‌ ಪ್ಲೇ ಆಫ್ ಪ್ರವೇಶಿಸದೆ ನಿರ್ಗಮಿಸಿದ್ದು ಇದೇ ಮೊದಲು.

Advertisement

ಜೈಪುರದ ಈ ದೊಡ್ಡ ಜಯದಲ್ಲಿ ರೈಡರ್‌ ಅರ್ಜುನ್‌ ದೇಶ್ವಾಲ್‌ ಪಾತ್ರ ಮಹತ್ವದ್ದಾಗಿತ್ತು. ಅವರು 20 ಅಂಕ ತಂದಿತ್ತರು. ಮತ್ತೋರ್ವ ರೈಡರ್‌ ಅಭಿಜೀತ್‌ ಮಲಿಕ್‌ 9, ಡಿಫೆಂಡರ್‌ ಅಂಕುಶ್‌ 7 ಅಂಕ ಗಳಿಸಿದರು. ಇದು 20 ಪಂದ್ಯಗಳಲ್ಲಿ ಜೈಪುರ್‌ ಸಾಧಿಸಿದ 14ನೇ ಜಯ.

ಬೆಂಗಾಲ್‌ಗೆ ಜಯ
ದ್ವಿತೀಯ ಪಂದ್ಯದಲ್ಲಿ ಯು ಮುಂಬಾಗೆ 46-34 ಅಂಕಗಳ ಸೋಲು ಣಿಸಿದ ಬೆಂಗಾಲ್‌ ವಾರಿಯರ್ ಪ್ಲೇ ಆಫ್ ರೇಸ್‌ನಲ್ಲಿ ಉಳಿದುಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next