Advertisement

Pro Kabaddi: ಡೆಲ್ಲಿಗೆ ತವರಿನ ಸೋಲು

11:46 PM Feb 02, 2024 | Team Udayavani |

ಹೊಸದಿಲ್ಲಿ: ದಬಾಂಗ್‌ ಡೆಲ್ಲಿ ತವರಿನ ಆವೃತ್ತಿಯ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದೆ. ಶುಕ್ರವಾರ ಇಲ್ಲಿನ “ತ್ಯಾಗರಾಜ್‌ ಇಂಡೋರ್‌ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖಿಯಲ್ಲಿ ಬೆಂಗಾಲ್‌ ವಾರಿಯರ್ 45-38 ಅಂತರದಿಂದ ಡೆಲ್ಲಿಯನ್ನು ಕೆಡವಿತು.

Advertisement

ರೈಡರ್‌ ನಿತಿನ್‌ ಕುಮಾರ್‌ (13 ಅಂಕ), ನಾಯಕ ಮಣಿಂದರ್‌ ಸಿಂಗ್‌ (11 ಅಂಕ) ಬೆಂಗಾಲ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಡೆಲ್ಲಿ ಪರ ನಾಯಕ ಆಶು ಮಲಿಕ್‌ ಆಮೋಘ ಪ್ರದರ್ಶನವಿತ್ತರು. ಪಂದ್ಯದಲ್ಲೇ ಸರ್ವಾಧಿಕ 17 ಅಂಕ ಗಳಿಸಿದ ಹಿರಿಮೆ ಇವರದು.

ಹರ್ಯಾಣಕ್ಕೆ ಗೆಲುವು: ದ್ವಿತೀಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 34-30 ಅಂತರದಿಂದ ಗುಜರಾತ್‌ ಜೈಂಟ್ಸ್‌ಗೆ ಸೋಲುಣಿಸಿತು. ಸಮಬಲದ ಹೋರಾಟ ಕಂಡ ಈ ಮುಖಾಮುಖಿಯಲ್ಲಿ ಹರ್ಯಾಣ ಕೊನೆಯ ನಿಮಿಷದಲ್ಲಿ ಮೇಲುಗೈ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next