Advertisement
ಪಂದ್ಯದ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಸ್ಟೀಲರ್ಸ್ ಪಡೆ, ಪಂದ್ಯದ ಮೊದಲಾರ್ಧ ಮುಕ್ತಾಯವಾಗುವಷ್ಟರಲ್ಲಿ 19-11 ಅಂಕಗಳ ಅಂತರದಿಂದ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಡೆಲ್ಲಿ ತಂಡ, ಮೇಲುಗೈ ಸಾಧಿಸಿ, ಸ್ಟೀಲರ್ಸ್‌ಗೆ ತಿರುಗೇಟು ನೀಡಿತು. ಆದರೂ, ತನ್ನ ನಿರಂತರ ಹೋರಾಟದ ಛಾತಿಯನ್ನು ಮುಂದುವರಿಸಿದ ಸ್ಟೀಲರ್ಸ್ ಪಡೆ ಪಂದ್ಯವನ್ನು ಗೆಲ್ಲುವಲ್ಲಿ ಸಫಲವಾಯಿತು.
Related Articles
ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಯುಪಿ ಯೋಧಾ 40-36 ಅಂಕ ಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿತು. ಪಂದ್ಯದ ಆರಂಭದಿಂದಲೂ ಎರಡೂ ತಂಡ ಗಳು ಸಮಾನ ಹೋರಾಟ ನಡೆಸಿದವು. ಒಮ್ಮೆ ಬೆಂಗಾಲ್ ಪಡೆ, ಮಗದೊಮ್ಮೆ ಯುಪಿ ಯೋಧಾ ಪಡೆ ಮೇಲುಗೈ ಸಾಧಿಸಿತ್ತಾ ಭಾರೀ ಪೈಪೋಟಿ ನಡೆಸಿದರು.
Advertisement
ಪಂದ್ಯದ ಪ್ರಥಮಾರ್ಧದಲ್ಲಿ ಯುಪಿ ಯೋಧಾ ಕೊಂಚ ಮುನ್ನಡೆ ಸಾಧಿಸಿತ್ತು. 30ನೇ ನಿಮಿಷ ದಲ್ಲಿ ಎರಡೂ ತಂಡಗಳ ಅಂಕ ಹತ್ತಿರಕ್ಕೆ ಬಂದಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಯುಪಿ ಯೋಧಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಯೋಧಾ ಪರ ಸುರೇಂದರ್ 9 ಅಂಕ, ಸುಮಿತ್ 4 ಅಂಕ ಗಳಿಸಿ ಗೆಲುವಿ ನಲ್ಲಿ ನೆರವಾದರು. ಬೆಂಗಾಲ್ ಪರ ನಾಯಕ ಮಣೀಂದರ್ 19 ಅಂಕ, ಸುಕೇಶ್ ಹೆಗ್ಡೆ 6 ಅಂಕ ಗಳಿಸಿದರು