Advertisement

ಪ್ರೊ ಕಬಡ್ಡಿ: ಗೆದ್ದು ಬೀಗಿದ ಗುಜರಾತ್‌

06:35 AM Nov 30, 2018 | Team Udayavani |

ಪುಣೆ: ಆರನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಗುರುವಾರದ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ 35-20 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್‌ ತಂಡವನ್ನು ಮಣಿಸಿತು. ಗೆಲುವಿನ ಸಂಖ್ಯೆಯನ್ನು ಹನ್ನೊಂದಕ್ಕೆ ಹೆಚ್ಚಿಸಿಕೊಂಡು ವಲಯ “ಎ’ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿತು.

Advertisement

ಅಬ್ಬರಿಸಿದ ಗುಜರಾತ್‌: ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಕೂಟದುದ್ದಕ್ಕೂ ಅಮೋಘ ಪ್ರದರ್ಶನ ನೀಡುತ್ತಿದೆ. ಪುಣೆಯ ಶಿವ ಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲೂ ಪುಣೆ ಅಂತಹುದೇ ತೂಕ ಭರಿತ ಮತ್ತೂಂದು ಪ್ರದರ್ಶನ ನೀಡಿತು. ಗುಜರಾತ್‌ ಪರ ಸಚಿನ್‌ ಆಲ್‌ರೌಂಡರ್‌ ಆಟ ಪ್ರದರ್ಶಿಸಿದರು. ರೈಡಿಂಗ್‌ನಿಂದ 6 ಅಂಕ ಹಾಗೂ ಟ್ಯಾಕಲ್‌ನಿಂದ ಅಮೋಘ 1 ಅಂಕವನ್ನು ತಂಡಕ್ಕೆ ತಂದುಕೊಟ್ಟರು. ಪ್ರಪಂಚನ್‌ (5 ಅಂಕ) ರೈಡಿಂಗ್‌ನಿಂದ ತಂಡಕ್ಕೆ ಸ್ವಲ್ಪ ಮಟ್ಟಿಗೆ ನೆರವಾದರು. ಉಳಿದಂತೆ ಸುನಿಲ್‌ ಕುಮಾರ್‌ (4 ಅಂಕ), ರೋಹಿತ್‌ ಗುಲಿಯಾ (4 ಅಂಕ) ಹಾಗೂ ರುತುರಾಜ್‌ (4 ಅಂಕ) ಪ್ರಚಂಡ ಟ್ಯಾಕಲ್‌ ಮಾಡುವ ಮೂಲಕ ತಂಡದ ಗೆಲುವನ್ನು ಸಾರಿದರು. ಒಟ್ಟಾರೆ ಟ್ಯಾಕಲ್‌ ಮೂಲಕ ಗುಜರಾತ್‌ ಆಟಗಾರರು ಅಬ್ಬರಿಸಿದರು. ತಂಡದ ಭಾರೀ ಮುನ್ನಡೆಗೆ ಕಾರಣವಾದರು.

ತವರಲ್ಲಿ ತಲೆತಗ್ಗಿಸಿದ ಪುಣೆ: ಪುಣೆ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಲಿಲ್ಲ. ಸಂದೀಪ್‌ ನರ್ವಾಲ್‌ (7 ಅಂಕ) ಹಾಗೂ ಗಿರೀಶ್‌ ಎರ್ನಾಕ್‌ (4 ಅಂಕ) ಟ್ಯಾಕಲ್‌ ಮೂಲಕ ಮೂಲಕ ನೆರವಾದದ್ದು ಬಿಟ್ಟರೆ ಉಳಿದಂತೆ ತಂಡಕ್ಕೆ ಯಾವುದೇ ನೆರವು ಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next