Advertisement

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ವಿರುದ್ಧ ಗೆಲುವಿನ ನಗೆ ಬೀರಿದ ಗುಜರಾತ್‌ ಜೈಂಟ್ಸ್‌

10:22 PM Feb 06, 2022 | Team Udayavani |

ಬೆಂಗಳೂರು: ಭಾನುವಾರ ನಡೆದ ಪ್ರೊ ಕಬಡ್ಡಿ 8ನೇ ಆವೃತ್ತಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಅನಿರೀಕ್ಷಿತವಾಗಿ ಸೋಲನುಭವಿಸಿತು.

Advertisement

ಪಂದ್ಯದ ಬಹುತೇಕ ಭಾಗ ಸಮಬಲದ ಹೋರಾಟ ನಡೆದರೂ ಕಡೆಯ ನಿಮಿಷಗಳಲ್ಲಿ ಗುಜರಾತ್‌ ಜೈಂಟ್ಸ್‌ ತಂಡ 40-36 ಅಂಕಗಳಿಂದ ಗೆಲುವು ಸಾಧಿಸಿತು. ಇಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಉದ್ದೇಶ ಹೊಂದಿದ್ದ ಪವನ್‌ ಸೆಹ್ರಾವತ್‌ ನಾಯಕತ್ವದ ಬೆಂಗಳೂರು ತಂಡ ನಿರಾಶೆ ಅನುಭವಿಸಿತು.

ಪಂದ್ಯದ ಮೊದಲನೇ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರು 14, ಗುಜರಾತ್‌ 15 ಅಂಕ ಗಳಿಸಿದ್ದವು. ಎರಡನೇ ಇಪ್ಪತ್ತು ನಿಮಿಷಗಳಲ್ಲಿ ಬೆಂಗಳೂರಿನ ಹಿನ್ನಡೆ ಇನ್ನೂ ಹೆಚ್ಚಾಯಿತು. ಬೆಂಗಳೂರು 22, ಗುಜರಾತ್‌ 25 ಅಂಕ ಗಳಿಸಿತು.

ಬೆಂಗಳೂರು ಪರ ನಾಯಕ ಪವನ್‌ ಎಂದಿನಂತೆ ಉತ್ತಮ ದಾಳಿಯನ್ನೇ ನಡೆಸಿದರು. ಆದರೆ ಅವರಿಗಿಂತ ಅಬ್ಬರಿಸಿದ್ದು ಭರತ್‌. ಇವರು ಕೇವಲ 14 ದಾಳಿಗಳಲ್ಲಿ 11 ಅಂಕ ಗಳಿಸಿದರು. ಇನ್ನು ಸೆಹ್ರಾವತ್‌ 18 ದಾಳಿಗಳಲ್ಲಿ 12 ಅಂಕ ಕಲೆ ಹಾಕಿದರು. ರಕ್ಷಣೆಯಲ್ಲಿ ಮಿನುಗಿದ ಅಮನ್‌ 3 ಅಂಕ ಪಡೆದರು. ಗುಜರಾತ್‌ನ ಪ್ರದೀಪ್‌ ಕುಮಾರ್‌ (21 ದಾಳಿ, 14 ಅಂಕ), ಅಜಯ್‌ ಕುಮಾರ್‌ (17 ದಾಳಿ, 8 ಅಂಕ) ಉತ್ತಮ ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next