ಸದ್ಯ ಆಡಿರುವ 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 38 ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿರುವ ಜೈಪುರ ತಂಡವು ತನ್ನ ಸ್ಥಾನವನ್ನು ಇನ್ನಷ್ಟು ಉತ್ತಮ ಪಡಿಸಲು ಪ್ರಯತ್ನಿಸಲಿದೆ. ತೆಲುಗು ವಿರುದ್ಧ ಜಯಭೇರಿ ಬಾರಿಸಿದರೆ ಜೈಪುರ 3ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.
Advertisement
ದಿನದ ದ್ವಿತೀಯ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪುನೇರಿ ಪಲ್ಟಾನ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಪುನೇರಿ ಪಲ್ಟಾನ್ಸ್ ಈ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಜಯಭೇರಿ ಬಾರಿ ಸಿರುವ ಪುನೇರಿ ತಂಡವು 46 ಅಂಕಗಳಿಸಿ ಅಗ್ರಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದೆ. ಗುಜರಾತ್ ಮೂರನೇ ಸ್ಥಾನದಲ್ಲಿ ರುವ ಕಾರಣ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ.
ಗಾಯಗೊಂಡಿರುವ ದಬಾಂಗ್ ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ ಅವರ 10ನೇ ಅವೃತ್ತಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರುವ ಡೆಲ್ಲಿ ತಂಡಕ್ಕೆ ನವೀನ್ ಅವರ ಅನುಪಸ್ಥಿತಿ ದೊಡ್ಡ ಹೊಡೆತ ಆಗಲಿದೆ. ಗಾಯದ ಸಮಸ್ಯೆಯಿಂದ ಅವರು ಡಿ. 27ರಿಂದ ಯಾವುದೇ ಪಂದ್ಯ ಆಡಿರಲಿಲ್ಲ. ಸದ್ಯದ ಮಾಹಿತಿಯಂತೆ ನವೀನ್ ಅವರ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಅವರು ಆರು ತಿಂಗಳು ಚೇತರಿಸಿಕೊಳ್ಳಲು ಬೇಕಾಗಬಹುದು. ಹೀಗಾಗಿ ನವೀನ್ ಅವರ ಅನುಪಸ್ಥಿತಿಯಲ್ಲಿ ಅಶು ಮಲಿಕ್ ಅವರು ಡೆಲ್ಲಿ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.