Advertisement

Pro Kabaddi: ಡೆಲ್ಲಿ ,ಹರ್ಯಾಣ ಗೆಲುವು

10:39 PM Dec 25, 2023 | Team Udayavani |

ಚೆನ್ನೈ: ನಾಯಕ ನವೀನ್‌ ಕುಮಾರ್‌ ಅವರ ಅಮೋಘ ಆಟದ ನೆರವಿನಿಂದ ಸೋಮವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 38-29 ಅಂತರದಿಂದ ಬೆಂಗಾಲ್‌ ವಾರಿಯರ್ಗೆ ಆಘಾತವಿಕ್ಕಿತು. ನವೀನ್‌ 11 ಅಂಕ ಗಳಿಸಿ ಕೊಟ್ಟರು.

Advertisement

ಡಿಫೆಂಡರ್‌ಗಳಾದ ಯೋಗೇಶ್‌ ಮತ್ತು ಆಶಿಷ್‌ ಪ್ರದರ್ಶನವೂ ಉತ್ತಮ ಮಟ್ಟದಲ್ಲಿತ್ತು (ತಲಾ 6 ಆಂಕ). ಇದು 6 ಪಂದ್ಯಗಳಲ್ಲಿ ಡೆಲ್ಲಿ ದಾಖಲಿಸಿದ 3ನೇ ಜಯ. ಮತ್ತೂಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ 42-29ರಿಂದ ಆತಿಥೇಯ ತಮಿಳ್‌ ತಲೈವಾಸ್‌ ತಂಡವನ್ನು ಕೆಡವಿತು. ಇದು 7 ಪಂದ್ಯಗಳಲ್ಲಿ ಹರ್ಯಾಣಕ್ಕೆ ಒಲಿದ 5ನೇ ಜಯ.

Advertisement

Udayavani is now on Telegram. Click here to join our channel and stay updated with the latest news.

Next