Advertisement
ಬುಧವಾರ ನಡೆದ ಸೆಮಿಫೈನಲ್ ಮುಖಾ ಮುಖೀಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಪರಾಭವಗೊಂಡವು. ಮೊದಲ ಸೆಣಸಾಟದಲ್ಲಿ ದಬಾಂಗ್ ಡೆಲ್ಲಿ 44-38 ಅಂತರದಿಂದ ಬುಲ್ಸ್ ತಂಡವನ್ನು ಕೆಡವಿತು. ಅನಂತರದ ರೋಚಕ ಮುಖಾಮುಖೀಯಲ್ಲಿ ಬೆಂಗಾಲ್ 37-35 ಅಂಕಗಳಿಂದ ಮುಂಬಾವನ್ನು ಮನೆಗಟ್ಟಿತು.
ಪವನ್ ಸೆಹ್ರಾವತ್ (18 ರೈಡಿಂಗ್ ಅಂಕ) ಪ್ರಚಂಡ ರೈಡಿಂಗ್ ಪ್ರದರ್ಶಿಸಿದರು. ಬೆಂಗಳೂರು ಬುಲ್ಸ್ ತಂಡವನ್ನು ಗೆಲ್ಲಿಸುವ ಎಲ್ಲ ಪ್ರಯತ್ನ ನಡೆಸಿದರು. ಮತ್ತೂಮ್ಮೆ ವನ್ ಮ್ಯಾನ್ ಆರ್ಮಿಯಾಗಿ ಮಿಂಚಿದರು. ಡೆಲ್ಲಿಗೆ ಕಬ್ಬಿಣದ ಕಡಲೆಯಾದರು. ಆದರೆ ಉಳಿದ ಆಟಗಾರರು ಕಳಪೆ ಆಟವಾಡಿದರು. ಬುಲ್ಸ್‌ಗೆ ತಿವಿದ ನವೀನ್, ಚಂದ್ರನ್
ಡೆಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿತು. ನವೀನ್ ಕುಮಾರ್ (15 ರೈಡಿಂಗ್ ಅಂಕ) ಹಾಗೂ ಚಂದ್ರನ್ ರಂಜಿತ್ (9 ಆಲ್‌ರೌಂಡರ್ ಅಂಕ) ಭರ್ಜರಿ ಪ್ರದರ್ಶನವಿತ್ತರು.
Related Articles
Advertisement
ಉಳಿದಂತೆ ವಿಜಯ್ (3 ಅಂಕ), ರವೀಂದರ್ ಪಹಾಲ್ (3 ಟ್ಯಾಕಲ್ ಅಂಕ), ಜೋಗಿಂದರ್ ನರ್ವಾಲ್ (3 ಟ್ಯಾಕಲ್ ಅಂಕ) ಗೆಲುವಿಗಾಗಿ ಶ್ರಮಿಸಿದರು.
ಪವನ್ ಏಕಾಂಗಿ ಹೋರಾಟಹಾಲಿ ಚಾಂಪಿಯನ್ಸ್ ಬುಲ್ಸ್‌ಗೆ ಪವನ್ ಸೆಹ್ರಾವತ್ ಎಂಬ ಬೆಂಕಿ ಬಿರುಗಾಳಿಯ ರೈಡರ್ ಪ್ರಮುಖ ಶಕ್ತಿಯಾಗಿದ್ದರು. ನಿರೀಕ್ಷೆಯಂತೆ ಅವರು ಅದ್ಭುತ ರೈಡಿಂಗ್ ಪ್ರದರ್ಶಿಸಿದರು. ರಕ್ಷಣಾ ವಿಭಾಗದಲ್ಲಿ ಅನುಭವಿಸಿದ ಭಾರೀ ವೈಫಲ್ಯ ಬೆಂಗಳೂರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಮಹೇಂದರ ಸಿಂಗ್ (2 ಟ್ಯಾಕಲ್ ಅಂಕ), ಸೌರಭ್ ನಂದಲ್ (2 ಟ್ಯಾಕಲ್ ಅಂಕ) ಹಾಗೂ ಅಂಕಿತ್ (0) ವೈಫಲ್ಯ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿತು.