Advertisement

ಪ್ರೊ ಕಬಡ್ಡಿ ಹಣಾಹಣಿ: ಜೈಪುರ್‌ ಪಿಂಕ್‌ ಪ್ಯಾಂಥರ್, ತೆಲುಗು ಟೈಟಾನ್ಸ್‌ ಗೆಲುವು

11:24 PM Nov 19, 2022 | Team Udayavani |

ಪುಣೆ: ಶನಿವಾರದ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 42-29 ಅಂಕಗಳ ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಇದರೊಂದಿಗೆ 15ನೇ ಪಂದ್ಯದಲ್ಲಿ 10 ಗೆಲುವು ಸಾಧಿಸಿತು. ಇನ್ನೊಂದೆಡೆ ಯೋಧಾಸ್‌ 6ನೇ ಸೋಲಿಗೆ ಸಿಲುಕಿತು.

Advertisement

ಜೈಪುರ್‌ ಜಯದಲ್ಲಿ 19 ಅಂಕ ಗಳಿಸಿದ ರೈಡರ್‌ ಅರ್ಜುನ್‌ ದೇಶ್ವಾಲ್‌ ಅವರ ಪರಾಕ್ರಮ ಅಮೋಘವಾಗಿತ್ತು. ಯೋಧಾಸ್‌ ಪರ ಪದೀಪ್‌ ನರ್ವಾಲ್‌ ಉತ್ತಮ ಪ್ರದರ್ಶನವಿತ್ತರು. ಇವರದು 14 ಅಂಕಗಳ ಸಾಧನೆ. ಇವರಿಬ್ಬರೇ ಈ ಪಂದ್ಯದ ಹೀರೋಗಳಾಗಿದ್ದರು.

ಟೈಟಾನ್ಸ್‌ಗೆ 2ನೇ ಗೆಲುವು
ದ್ವಿತೀಯ ಪಂದ್ಯದಲ್ಲಿ ತೆಲುವು ಟೈಟಾನ್ಸ್‌ ಅಪರೂಪದ ಗೆಲುವು ಕಂಡಿತು. ಅದು ಯು ಮುಂಬಾವನ್ನು 32-26 ಅಂಕಗಳಿಂದ ಮಣಿಸಿ 16ನೇ ಪಂದ್ಯದಲ್ಲಿ ತನ್ನ 2ನೇ ಜಯ ಸಾಧಿಸಿತು. ಉಳಿದ 14ರಲ್ಲಿ ಟೈಟಾನ್ಸ್‌ ಸೋಲನುಭವಿಸಿದೆ.

ಟೈಟಾನ್ಸ್‌ ರೈಡರ್‌ ಸಿದ್ಧಾರ್ಥ್ ದೇಸಾಯಿ 9 ಅಂಕ, ಮುಂಬಾದ ರೈಡರ್‌ ಗುರ್ಮಾನ್‌ ಸಿಂಗ್‌ 8 ಅಂಕ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next