Advertisement

Pro Kabaddi: ಬೆಂಗಳೂರು, ಗುಜರಾತ್‌ ಜಯಭೇರಿ

10:52 PM Feb 04, 2024 | Team Udayavani |

ಹೊಸದಿಲ್ಲಿ: ಪ್ರೊ ಕಬಡ್ಡಿಯ ರವಿವಾರದ ಎರಡು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ಜಯಭೇರಿ ಬಾರಿಸಿದೆ.

Advertisement

ಮೊದಲ ಪಂದ್ಯದಲ್ಲಿ ಅಕ್ಷಿತ್‌, ಸುಶೀಲ್‌ ಮತ್ತು ಸುರ್ಜೀತ್‌ ಸಿಂಗ್‌ ಅವರ ಉತ್ತಮ ಆಟದಿಂದಾಗಿ ಬೆಂಗಳೂರು ಬುಲ್ಸ್‌ ತಂಡವು ಯು ಮುಂಬಾ ತಂಡವನ್ನು 42-37 ಅಂಕಗಳಿಂದ ಸೋಲಿಸಿದೆ. ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ತಂಡವು ತಮಿಳ್‌ ತಲೈವಾಸ್‌ ತಂಡವನ್ನು 42-30 ಅಂಕಗಳಿಂದ ಮಣಿಸಿತು. ಸೋಮವಾರ ನಡೆಯುವ ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೈಪುರ ಪಿಂಕ್‌ ಪ್ಯಾಂಥರ್ ತಂಡವು ಪಾಟಾ ಪೈರೇಟ್ಸ್‌ ತಂಡವನ್ನು ಎದುರಿಸಲಿದ್ದರೆ ಇನ್ನೊಂದು ಪಂದ್ಯದಲ್ಲಿ ಆತಿಥೇಯ ದಬಾಂಗ್‌ ಡೆಲ್ಲಿ ತಂಡವು ಪುನೇರಿ ಪಲ್ಟಾನ್ಸ್‌ ತಂಡವನ್ನು ಎದುರಿಸಲಿದೆ. ಪುನೇರಿ ಮತ್ತು ಡೆಲ್ಲಿ ಅಂಕಪಟ್ಟಿಯಲ್ಲಿ ಸದ್ಯ ದ್ವಿತೀಯ ಮತ್ತು ಮೂರನೇ ಸ್ಥಾನದಲ್ಲಿದೆ.

ಹೈದರಾಬಾದ್‌ನಲ್ಲಿ ಫೈನಲ್‌
ಮುಂಬಯಿ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 10ನೇ ಆವೃತ್ತಿಯ ಪ್ಲೇ ಆಫ್ ಮತ್ತು ಫೈನಲ್‌ ಪಂದ್ಯಗಳು ಫೆ. 26ರಿಂದ ಮಾ.1ರ ವರೆಗೆ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ (ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣ) ನಡೆಯಲಿವೆ ಎಂದು ಪಿಕೆಎಲ್‌ ಸಂಘಟಕ ಮಶಾಲ್‌ ನ್ಪೋರ್ಟ್ಸ್ ಪ್ರಕಟಿಸಿದೆ.

ಲೀಗ್‌ ಹಂತದಲ್ಲಿ ಅಗ್ರ ಎರಡು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಏತನ್ಮಧ್ಯೆ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ತಂಡಗಳು ಫೆ.26ರಂದು ಎಲಿಮಿನೇಟರ್‌ ಹಂತದಲ್ಲಿ ಮುಖಾಮುಖೀಯಾಗಲಿವೆ.

ಮೂರನೇ ಸ್ಥಾನ ಪಡೆಯುವ ತಂಡ ಎಲಿಮಿನೇಟರ್‌ 1ರಲ್ಲಿ ಆರನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ. ನಾಲ್ಕನೇ ಸ್ಥಾನ ಪಡೆಯುವ ತಂಡ ಎಲಿಮಿನೇಟರ್‌ 2ರಲ್ಲಿ ಐದನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ.

Advertisement

ಎಲಿಮಿನೇಟರ್‌ 1ರ ವಿಜೇತರು ಸೆಮಿಫೈನಲ್‌ 1ರಲ್ಲಿ ಟೇಬಲ್‌ ಟಾಪರ್‌ಗಳ ವಿರುದ್ಧ ಮತ್ತು ಎಲಿಮಿನೇಟರ್‌ 2ರ ವಿಜೇತರು ಫೆ.28ರಂದು ಸೆಮಿಫೈನಲ್‌ 2ರಲ್ಲಿ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿ¨ªಾರೆ. ಅನಂತರ ಫೈನಲ್‌ ಮಾ.1ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next