Advertisement

Pro Kabaddi; ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್‌ , ಜೈಪುರ್‌

10:40 PM Dec 11, 2023 | Team Udayavani |

ಬೆಂಗಳೂರು: ಪ್ರೊ ಕಬಡ್ಡಿ 10ನೇ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್‌ ಮತ್ತು ಜೈಪುರ್‌ ಪಿಂಕ್‌ ಪ್ಯಾಂಥರ್ ಗೆಲುವಿನ ಖಾತೆ ತೆರೆದಿವೆ. ಎರಡೂ ತಂಡಗಳ ಅಭಿಮಾನಿಗಳು ಮೊದಲ ಬಾರಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದರು.

Advertisement

ಸತತ 4 ಪಂದ್ಯಗಳನ್ನು ಸೋತು ಭಾರೀ ನಿರಾಸೆ ಮೂಡಿಸಿದ್ದ ಬೆಂಗಳೂರು ಬುಲ್ಸ್‌ ಸೋಮವಾರದ ಮುಖಾ ಮುಖೀಯಲ್ಲಿ ಯುಪಿ ಯೋಧಾಸ್‌ ವಿರುದ್ಧ ಜಿದ್ದಾಜಿದ್ದಿ ಹೋರಾಟ ನಡೆಸಿ 38-36 ಅಂತರದ ಗೆಲುವು ಸಾಧಿಸಿತು. ರೈಡರ್‌ಗಳಾದ ವಿಕಾಸ್‌ ಖಂಡೋಲ ಮತ್ತು ಭರತ್‌ ತಲಾ 11 ಅಂಕ ಗಳಿಸಿ ಬುಲ್ಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜೈಪುರ ವಿಜಯ
ದಿನದ ಮೊದಲ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ ರೋಚಕ ಹಣಾಹಣಿಯಲ್ಲಿ ಗುಜರಾತ್‌ ಜೈಂಟ್ಸ್‌ಗೆ 35-32 ಅಂತರದ ಸೋಲುಣಿಸಿತು. ಇದು ಜೈಪುರದ 3ನೇ ಪಂದ್ಯ. ಒಂದನ್ನು ಸೋತಿರುವ ಸುನೀಲ್‌ ಕುಮಾರ್‌ ಪಡೆ, ಇನ್ನೊಂದನ್ನು ಟೈ ಮಾಡಿಕೊಂಡಿತ್ತು.
ಜೈಪುರ್‌ ಜಯದಲ್ಲಿ ರೈಡರ್‌ ಅರ್ಜುನ್‌ ದೇಶ್ವಾಲ್‌ ಪಾತ್ರ ಮಹತ್ವ ದ್ದಾಗಿತ್ತು. ಅವರದು 15 ಅಂಕಗಳ ಬೇಟೆ. ಸುನೀಲ್‌ ಕುಮಾರ್‌ 5 ಅಂಕ ಗಳಿಸಿದರು. ಗುಜರಾತ್‌ ಪರ ರೈಡರ್‌ ಸೋನು ಅಮೋಘ ಪ್ರದರ್ಶನ ನೀಡಿ 13 ಅಂಕ ಬಾಚಿದರು.

Advertisement

Udayavani is now on Telegram. Click here to join our channel and stay updated with the latest news.

Next