Advertisement

Pro Kabaddi; ಪಾಟ್ನಾವನ್ನು ಕೆಡವಿದ ಬೆಂಗಳೂರು ಬುಲ್ಸ್‌

12:11 AM Jan 09, 2024 | Team Udayavani |

ಮುಂಬಯಿ: ಕೊನೆಯ 3 ನಿಮಿಷದಲ್ಲಿ ಪಾಟ್ನಾ ಪೈರೆಟ್ಸ್‌ ಮೇಲಿನ ದಾಳಿಯನ್ನು ತೀವ್ರಗೊಳಿಸಿದ ಬೆಂಗಳೂರು ಬುಲ್ಸ್‌ ಸೋಮವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ 35-33 ಅಂತರದ ರೋಚಕ ಜಯ ದಾಖಲಿಸಿದೆ.

Advertisement

ಆಲ್‌ರೌಂಡರ್‌ ಸಚಿನ್‌ ನರ್ವಾಲ್‌ ಮತ್ತು ಡಿಫೆಂಡರ್‌ ಸುರ್ಜಿತ್‌ ಸಿಂಗ್‌ ಅವರ ಅಮೋಘ ಸಾಹಸ ಬುಲ್ಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಇವರಿಬ್ಬರು ಕ್ರಮವಾಗಿ 9 ಹಾಗೂ 8 ಅಂಕ ಗಳಿಸಿ ಕೊಟ್ಟರು. ಪಾಟ್ನಾ ಪರ ರೈಡರ್‌ ಮಂಜೀತ್‌ ಅವರದು ಅತ್ಯಧಿಕ 7 ಅಂಕಗಳ ಸಾಧನೆ.

ಇದು 12 ಪಂದ್ಯಗಳಲ್ಲಿ ಬುಲ್ಸ್‌ ಸಾಧಿಸಿದ ಕೇವಲ 5ನೇ ಜಯ. ಪಾಟ್ನಾ 11 ಪಂದ್ಯಗಳಲ್ಲಿ 6ನೇ ಸೋಲನುಭವಿಸಿತು.
ಮುಂಬಾಗೆ ಸೋಲು
ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 40-34 ಅಂಕಗಳಿಂದ ಆತಿಥೇಯ ಯು ಮುಂಬಾವನ್ನು ಮಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next