Advertisement
ಬುಲ್ಸ್ ತಂಡವು ಅಜಿಂಕ್ಯ ಪವಾರ್, ಅಕ್ಷಿತ್ ಧುಲ್ ಮತ್ತು ಸುರೀಂದರ್ ಸಿಂಗ್ ಅವರ ಉತ್ತಮ ರೈಡ್‌ನ ಲಾಭ ಪಡೆಯಿತು. ಈ ಮೂವರ ದಾಳಿಯಿಂದಾಗಿ ತಮಿಳ್ ಕೊನೆಗೆ ಶರಣಾಯಿತು. ಬುಲ್ಸ್ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ತಲಾ 16 ಅಂಕ ಗಳಿಸಿ ಮೇಲುಗೈ ಸಾಧಿಸಿತು. ಕೊನೆಹಂತದವರೆಗೂ ಸಮಬಲದಿಂದ ಸಾಗಿದ ಈ ಪಂದ್ಯದ ಅಂತಿಮ ಕ್ಷಣದಲ್ಲಿ ಬುಲ್ಸ್ ಗೆಲುವಿನ ನಗೆ ಚೆಲ್ಲಿತು.
Related Articles
ಈ ಮೊದಲು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ ಪುನೇರಿ ಪಲ್ಟಾನ್ 49-30 ಅಂತರದ ಭರ್ಜರಿ ಜಯ ಗಳಿಸಿದೆ. ಇದು ಪಲ್ಟಾನ್‌ಗೆ ಈ ಪಂದ್ಯಾ ವಳಿಯ 5ನೇ ಗೆಲುವಾದರೆ ಗುಜರಾತ್‌ಗೆ ಇದು 4ನೇ ಸೋಲಿನ ಕಹಿ. ಈ ಗೆಲುವಿನಿಂದ ಪುನೇರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.
Advertisement
ಪುನೇರಿ ಪಲ್ಟಾನ್ ಪರ ಆಕಾಶ್ ಶಿಂಧೆ 9 ರೈಡ್, 2 ಬೋನಸ್ ಸೇರಿ 11 ಅಂಕ ಗಳಿಸಿದರು. ಇನ್ನು ಪಂಕಜ್ ಮೋಹಿತೆ 8, ಅಭಿನೇಶ್ ನಾದರಜನ್, ಮೋಹಿತ್ ಗೋಯಟ್, ಗೌರವ್ ಖತ್ರಿ, ಅಮನ್ ತಲಾ 5 ಅಂಕ ಗಳಿಸಿ ತಂಕ್ಕೆ ಬಲ ತುಂಬಿದರು. ಎದುರಾಳಿ ಗುಜರಾತ್ ಜೈಂಟ್ಸ್ ಪರ ಗುಮಾನ್ ಸಿಂಗ್ 12 ಅಂಕ ಗಳಿಸಿದ್ದೇ ಹೆಚ್ಚು. ಉಳಿದಂತೆ ಹಿಮಾಂಶು 5, ಜಿತೇಂದರ್ ಯಾದವ್, ರಾಶೇಕ್ ಸಂಗೋರ್ಯ ಮತ್ತು ಹಿಮಾಂಶು ತಲಾ 2 ಅಂಕ ನೀಡಿದರು.
ಪುನೇರಿ 24 ರೈಡ್, 1 ಸೂಪರ್ ರೈಡ್, 15 ಟ್ಯಾಕಲ್, 6 ಆಲೌಟ್, 4 ಹೆಚ್ಚುವರಿ ಅಂಕಗಳನ್ನು ಗೆದ್ದರೆ, ಗುಜರಾತ್ ತಂಡ 19 ರೈಡ್, 7 ಟ್ಯಾಕಲ್, 2 ಆಲೌಟ್ ಮತ್ತು 2 ಹೆಚ್ಚುವರಿ ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆಗೊಳಿಸಿಕೊಂಡಿತು.
ಮಂಗಳವಾರ ನಡೆಯುವ ಪಂದ್ಯದಲ್ಲಿ ಜೈಪುರ ತಂಡವು ಯುಪಿ ಯೋಧಾಸ್ ತಂಡವನ್ನು ಎದುರಿಸಲಿದ್ದರೆ ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ಎರಡನೇ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ.
ಮಂಗಳವಾರದ ಪಂದ್ಯಗಳು
1. ಜೈಪುರ ಯುಪಿಆರಂಭ: ರಾತ್ರಿ 8 ಗಂಟೆ 2. ಮುಂಬಾ ಡೆಲ್ಲಿ
ಆರಂಭ: ರಾತ್ರಿ 9 ಗಂಟೆ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್