Advertisement

Pro Kabaddi; ಬೆಂಗಾಲ್‌-ಯೋಧಾಸ್‌ ಪಂದ್ಯ ಟೈ

11:31 PM Dec 18, 2023 | Team Udayavani |

ಪುಣೆ: ಜಿದ್ದಾಜಿದ್ದಿ ಪೈಪೋಟಿ ಕಂಡ ಬೆಂಗಾಲ್‌ ವಾರಿಯರ್-ಯುಪಿ ಯೋಧಾಸ್‌ ನಡುವಿನ ಸೋಮವಾರದ ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಎರಡೂ ತಂಡಗಳು 37 ಅಂಕ ಗಳಿಸಿದವು.

Advertisement

ಬೆಂಗಾಲ್‌ ಪರ ರೈಡರ್‌ಗಳಾದ ನಿತಿನ್‌ ಕುಮಾರ್‌ (10), ಮಣಿಂದರ್‌ ಸಿಂಗ್‌ (9), ಶ್ರೀಕಾಂತ್‌ ಜಾಧವ್‌ (6) ಉತ್ತಮ ಪ್ರದರ್ಶನ ನೀಡಿದರು. ಯುಪಿ ತಂಡದಲ್ಲಿ ಸುರೇಂದರ್‌ ಗಿಲ್‌ ಆಟ ಅಮೋಘ ಮಟ್ಟದಲ್ಲಿತ್ತು. ಇವರದು 18 ಅಂಕಗಳ ಸಾಧನೆ. ಆಲ್‌ರೌಂಡರ್‌ ವಿಜಯ್‌ ಮಲಿಕ್‌ 7 ಅಂಕ ಸಂಪಾದಿಸಿದರು. ದ್ವಿತೀಯ ಪಂದ್ಯದಲ್ಲಿ ಪುನೇರಿ ಪಲ್ಟಾನ್‌ 30-23 ಅಂತರದಿಂದ ದಬಾಂಗ್‌ ಡೆಲ್ಲಿಯನ್ನು ಸೋಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next