ಬೆಂಗಳೂರು: ಜಿದ್ದಾಜಿದ್ದಿ ಹೋರಾಟ ಕಂಡ ದಬಾಂಗ್ ದಿಲ್ಲಿ ಮತ್ತು ಬೆಂಗಾಲ್ ವಾರಿಯರ್ ನಡುವಿನ ಗುರುವಾರದ ಮೊದಲ ಪ್ರೊ ಕಬಡ್ಡಿ ಪಂದ್ಯ 39-39 ಅಂಕಗಳ ಸಮಬಲದ ಮುಕ್ತಾಯ ಕಂಡಿದೆ.
ಇದು ಎರಡೂ ತಂಡಗಳು ಕಾಣುತ್ತಿರುವ ಸತತ 2ನೇ ಟೈ ಫಲಿತಾಂಶವಾಗಿದೆ.
ಕೊನೆಯ ಹಂತದಲ್ಲಿ ದಿಲ್ಲಿಯ ಹೀರೋ ನವೀನ್ ಕುಮಾರ್ ಸೂಪರ್ ರೈಡಿಂಗ್‌ನಲ್ಲಿ 3 ಅಂಕ ಗಳಿಸಿ ಮುನ್ನಡೆ ತಂದಿತ್ತರೂ ಲಾಭವಾಗಲಿಲ್ಲ. ಬೆಂಗಾಲ್‌ನ ರೋಹಿತ್ ಇದಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.
ಮನ್‌ಜಿàತ್ ಅವರ ಟ್ಯಾಕಲ್‌ನಿಂದ ಪಾರಾದ ಅವರು ಒಂದು ಬೋನಸ್ ಜತೆಗೆ 2 ಬಹುಮೂಲ್ಯ ಅಂಕ ಗಳಿಸಿದರು. ಅಲ್ಲಿಗೆ ಪಂದ್ಯದ ಅವಧಿ ಮುಗಿಯಿತು. ದಿಲ್ಲಿ ಪರ ನವೀನ್ ಕುಮಾರ್ ಸರ್ವಾಧಿಕ 16, ಆಲ್‌ರೌಂಡರ್ ವಿಜಯ್ 9, ನಾಯಕ ಜೋಗಿಂದರ್ ನರ್ವಾಲ್ 3 ಅಂಕ ಗಳಿಸುವಲ್ಲಿ ಯಶಸ್ವಿಯಾದರು. ಬೆಂಗಾಲ್ ನಾಯಕ ಮಣಿಂದರ್ ಸಿಂಗ್ 16 ಅಂಕ ಗಳಿಸಿ ಮಿಂಚಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಪಾಟ್ನಾ ತಂಡ ಪುಣೇರಿ ವಿರುದ್ಧ 43-26 ಅಂತರದಿಂದ ಗೆಲುವು ಸಾಧಿಸಿದೆ. ಇದು ಪಾಟ್ನಾಗೆ ಒಲಿದ ಸತತ 5ನೇ ಗೆಲುವು.