Advertisement
ದಕ್ಷಿಣ ಭಾರತದ ಈ ತಂಡಗಳ ನಡುವಿನ ಹೋರಾಟ ಆರಂಭ ದಿಂದಲೇ ತೀವ್ರ ಪೈಪೋಟಿ ಕಂಡಿತು. ವಿರಾಮದ ವೇಳೆ ತಲೈವಾಸ್ 20-17 ಅಂಕಗಳ ಮುನ್ನಡೆಯಲ್ಲಿತ್ತು. ಕೊನೆಯ ನಿಮಿಷಗಳಲ್ಲಿ ಸ್ಪರ್ಧೆ ತೀವ್ರ ಗೊಂಡಿತು. ಅದೃಷ್ಟ ಬುಲ್ಸ್ ಪಾಳೆ ಯದಲ್ಲಿತ್ತು. ಇದು 10 ಪಂದ್ಯಗಳಲ್ಲಿ ಬೆಂಗಳೂರು ತಂಡ ದಾಖಲಿಸಿದ 4ನೇ ಜಯ. ರೈಡರ್ ಭರತ್ ಸರ್ವಾಧಿಕ 10 ಅಂಕ ತಂದಿತ್ತರು.ತಲೈವಾಸ್ 9 ಪಂದ್ಯಗಳಲ್ಲಿ 7ನೇ ಸೋಲನುಭವಿಸಿತು.
ದಿನದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 51-42 ಅಂಕಗ ಳಿಂದ ಬೆಂಗಾಲ್ ವಾರಿಯರ್ಗೆ ಸೋಲುಣಿಸಿತು. ಇದರೊಂದಿಗೆ 9 ಪಂದ್ಯಗಳಲ್ಲಿ 6ನೇ ಜಯ ಗಳಿಸುವ ಮೂಲಕ ಫಜಲ್ ಅಟ್ರಾಚಲಿ ಪಡೆ ಪ್ರಭುತ್ವ ಸಾಧಿಸಿತು. ಬೆಂಗಾಲ್ ಇಷ್ಟೇ ಪಂದ್ಯಗಳಲ್ಲಿ 4ನೇ ಸೋಲುಂಡಿತು. ಗುಜರಾತ್ ಜಯದಲ್ಲಿ ರೈಡರ್ ಪ್ರತೀಕ್ ದಹಿಯಾ ಅವರ ಪರಾಕ್ರಮ ಪ್ರಮುಖ ಪಾತ್ರ ವಹಿಸಿತು. ಅವರೊಬ್ಬರೇ ಬರೋಬ್ಬರಿ 25 ಅಂಕ ತಂದುಕೊಟ್ಟರು. 22 ಟಚ್ ಪಾಯಿಂಟ್ ಹಾಗೂ 3 ಟ್ಯಾಕಲ್ ಪಾಯಿಂಟ್‌ಗಳನ್ನು ಇದು ಒಳಗೊಂಡಿದೆ. ಮತ್ತೋರ್ವ ರೈಡರ್ ರಾಕೇಶ್ 6 ಅಂಕ ಗಳಿಸಿದರು.
ಬೆಂಗಾಲ್ ಪರ ನಿತಿನ್ ಕುಮಾರ್ 12, ನಾಯಕ-ರೈಡರ್ ಮಣಿಂದರ್ ಸಿಂಗ್ 11, ಶ್ರೀಕಾಂತ್ ಜಾಧವ್ 9 ಅಂಕಗಳನ್ನು ಖಾತೆಗೆ ಸೇರಿಸಿದರು.