Advertisement
ಇದು, ಅಂಕಪಟ್ಟಿಯ ಕೊನೆಯ 2 ಸ್ಥಾನ ದಲ್ಲಿರುವ ತಂಡಗಳ ನಡುವಿನ ಹೋರಾಟ ವಾಗಿತ್ತು. ಈ ಫಲಿತಾಂಶದ ಬಳಿಕವೂ ಬುಲ್ಸ್ ಕಡೆಯ ಸ್ಥಾನದಲ್ಲೇ ಉಳಿದುಕೊಂಡಿದೆ. ಗುಜರಾತ್ ಒಂದು ಸ್ಥಾನ ಮೇಲಿದೆ. ಇದು ಬುಲ್ಸ್ ಸಾಧಿಸಿದ ಮೊದಲ ಟೈ ಫಲಿತಾಂಶ. ಉಳಿದಂತೆ 13 ಪಂದ್ಯಗಳನ್ನು ಸೋತಿದೆ, ಎರಡನ್ನಷ್ಟೇ ಗೆದ್ದಿದೆ. ಬೆಂಗಳೂರು ಬುಲ್ಸ್‌ನ ಆಲ್‌ರೌಂಡರ್ ನಿತಿನ್ ರಾವಲ್ 7, ರೈಡರ್‌ಗಳಾದ ಪ್ರದೀಪ್ ನರ್ವಾಲ್ ಮತ್ತು ಸುಶೀಲ್ ತಲಾ 6, ಜೈ ಭಗವಾನ್ 4 ಅಂಕ ಗಳಿಸಿದರು. ಗುಜರಾತ್ ಪರ ರಾಕೇಶ್ ಸಂಗೋರ್ಯ 9, ನೀರಜ್ ಕುಮಾರ್ 5, ಸೋಮ್‌ಬೀರ್ ಮತ್ತು ರೋಹಿತ್ ತಲಾ 4 ಅಂಕ ತಂದಿತ್ತರು.
ತವರಿನ ಆವೃತ್ತಿಯಲ್ಲಿ ಪುಣೇರಿ ಪಲ್ಟಾನ್ ಸೋಲಿನ ಆರಂಭ ಕಂಡಿದೆ. ದಿನದ ದ್ವಿತೀಯ ಪಂದ್ಯದಲ್ಲಿ ಯು ಮುಂಬಾ 43-29 ಅಂಕಗಳಿಂದ ಪುಣೇರಿಯನ್ನು ಕೆಡವಿತು. ಮುಂಬಾ ಪರ ರೈಡರ್ ಅಜಿತ್ ಚೌಹಾಣ್ ಸೊಗಸಾದ ಆಟವಾಡಿ 12 ಅಂಕ ತಂದಿತ್ತರು.