Advertisement
ವಿರಾಮದ ವೇಳೆ ದಿಲ್ಲಿ 19-14ರ ಲೀಡ್ ಹೊಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಬುಲ್ಸ್ ಒಮ್ಮೆಲೇ ಆಕ್ರಮಣಕಾರಿ ಆಟಕ್ಕಿಳಿಯಿತು. ಸತತವಾಗಿ ಅಂಕ ಗಳಿಸುತ್ತ ಹೋಯಿತು. ಕೊನೆಯ 3 ನಿಮಿಷಗಳಲ್ಲಿ ದಿಲ್ಲಿ ತಿರುಗಿ ಬಿತ್ತು.ನಾಯಕ ಪವನ್ ಸೆಹ್ರಾವತ್ ಅವರ ಪ್ರಚಂಡ ರೈಡಿಂಗ್ ಬುಲ್ಸ್‌ಗೆ ಮೇಲುಗೈ ತಂದಿತ್ತಿತು. ಅವರು 17 ಅಂಕ ಗಳಿಸಿ ಕೊಟ್ಟರು. ಮರಳಿ ದಿಲ್ಲಿ ನಾಯಕತ್ವ ವಹಿಸಿದ ನವೀನ್ ಕುಮಾರ್ 13 ಅಂಕ ಗಳಿಸಿದರು. ಸೆಹ್ರಾವತ್ ಅವರ ಅಂತಿಮ ರೈಡಿಂಗ್ ವೇಳೆ ಬುಲ್ಸ್ ಒಂದಂಕದ ಮುನ್ನಡೆಯಲ್ಲಿತ್ತು. ಆದರೆ ಅವರನ್ನು ಟ್ಯಾಕಲ್ ಮಾಡುವ ಮೂಲಕ ದಿಲ್ಲಿ ಸಮಬಲ ಸಾಧಿಸಿತು.
ನಾಯಕ ವಿಕಾಸ್ ಕಂಡೋಲ (10) ಮತ್ತು ವಿನಯ್ (8) ಅವರ ರೈಡಿಂಗ್ ಸಾಹಸದಿಂದ ಹರ್ಯಾಣ ಸ್ಟೀಲರ್ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ ತಂಡವನ್ನು 46-29 ಅಂಕಗಳ ಭಾರೀ ಅಂತರದಿಂದ ಮಣಿಸಿತು. ಇದು ಹರ್ಯಾಣ 16 ಪಂದ್ಯಗಳಲ್ಲಿ ಸಾಧಿಸಿದ 7ನೇ ಗೆಲುವು. ಜಿದ್ದಾಜಿದ್ದಿಯಿಂದ ಕೂಡಿದ್ದ ಮೊದಲಾರ್ಧದಲ್ಲಿ ಉಭಯ ತಂಡಗಳು 19-19 ಸಮಬಲ ಸಾಧಿಸಿದ್ದವು. ಆದರೆ ದ್ವಿತಿಯಾರ್ಧದಲ್ಲಿ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಹರ್ಯಾಣ ಮಿಂಚಿನ ಪ್ರದರ್ಶನ ನೀಡಿತು. ಕೊನೆಯ 3 ನಿಮಿಷದ ವೇಳೆ ಹರ್ಯಾಣ ಕೇವಲ 4 ಅಂಕಗಳ ಮುನ್ನಡೆಯಲ್ಲಿತ್ತು. ಅನಂತರ ಅಂಕಗಳನ್ನು ಬಾಚಿ ಮೇಲುಗೈ ಸಾಧಿಸಿತು.
Related Articles
Advertisement