Advertisement

ಪ್ರೊ ಕಬಡ್ಡಿ: ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಸೋಲು

10:09 PM Nov 23, 2022 | Team Udayavani |

ಹೈದರಾಬಾದ್‌: ಪ್ರೊ ಕಬಡ್ಡಿ ಬುಧವಾರದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ರೋಚಕ ಸೋಲನುಭವಿಸಿತು. ಬೆಂಗಾಲ್‌ ವಾರಿಯರ್ಸ್‌ 41-38 ಅಂಕಗಳಿಂದ ಬೆಂಗಳೂರನ್ನು ಸೋಲಿಸಿತು.

Advertisement

ಬೆಂಗಾಲ್‌ ಪರ ಎಂದಿನಂತೆ ಮಣಿಂದರ್‌ ಸಿಂಗ್‌ ಉತ್ತಮವಾಗಿ ದಾಳಿ ನಡೆಸಿ 12 ಅಂಕ ಪಡೆದರು. ಶ್ರೀಕಾಂತ್‌ ಜಾಧವ್‌ 19 ದಾಳಿಗಳಲ್ಲಿ 9 ಅಂಕ ಸಂಪಾದಿಸಿದರು.

ರಕ್ಷಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗಿರೀಶ್‌ ಮಾರುತಿ 8 ಯತ್ನಗಳಲ್ಲಿ 6 ಅಂಕ ಸಂಪಾದಿಸಿದರು. ಇನ್ನು ಬೆಂಗಳೂರು ಪರ ಭರತ್‌ ಅದ್ಭುತ ದಾಳಿ ನಡೆಸಿದರು. ಅವರು 13 ದಾಳಿಗಳಲ್ಲಿ 10 ಅಂಕ ಸಂಪಾದಿಸಿದರು. ಇವರಿಗೆ ವಿಕಾಶ್‌ ಕಂಡೊಲ (5) ಉತ್ತಮ ನೆರವು ನೀಡಿದರು. ಉಳಿದ ದಾಳಿಗಾರರು ವಿಫ‌ಲರಾದರು. ರಕ್ಷಣೆಯಲ್ಲಿ ಅಮನ್‌ (4) ಮಿನುಗಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next