Advertisement

ಬೆಂಗಳೂರಿಗೆ 5ನೇ ಸೋಲು

12:25 PM Aug 19, 2017 | Team Udayavani |

ಲಕ್ನೋ: ಜಸ್ವೀರ್‌ ಸಿಂಗ್‌ ಚುರುಕಿನ ರೈಡಿಂಗ್‌ (10 ಅಂಕ) ಹಾಗೂ ಮಂಜಿತ್‌ ಚಿಲ್ಲಾರ್‌ (8 ಅಂಕ) ಅಮೋಘ ಕ್ಯಾಚಿಂಗ್‌ನಿಂದಾಗಿ ಬೆಂಗಳೂರು ಬುಲ್ಸ್‌ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ ರೋಚಕ 30-28 ಅಂತರದ ಜಯ ಸಾಧಿಸಿದೆ. ಸೋಲುಂಡ ಬೆಂಗಳೂರು ಬುಲ್ಸ್‌ ಕೂಟದಲ್ಲಿ
ಒಟ್ಟಾರೆ 5ನೇ ಮುಖಭಂಗ ಅನುಭವಿಸಿತು. 

Advertisement

ಕೊನೆ 2 ನಿಮಿಷದಲ್ಲಿ ಬುಲ್ಸ್‌ಗೆ ಸೋಲು: ಬಾಬು ಬನಾರಸಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯ ರೋಚಕವಾಗಿತ್ತು. ಕೊನೆ 5 ನಿಮಿಷದವರೆಗೆ ಬೆಂಗಳೂರು ಹಾಗೂ ಜೈಪುರ ಸಮಬಲ ಕಾಯ್ದುಕೊಂಡಿದ್ದವು. ಆದರೆ ಪಂದ್ಯ ಮುಗಿಯಲು ಇನ್ನೇನು 2 ನಿಮಿಷವಷ್ಟೇ ಇದ್ದಾಗ
ಜೈಪುರ ಮಿಂಚಿನ ಆಟ ಪ್ರದರ್ಶಿಸಿತು. ಏಕಾಏಕಿ ದಾಳಿಯಿಂದ ಬುಲ್ಸ್‌ ಕುಸಿಯಿತು. ಒಟ್ಟಾರೆ 22 ರೈಡಿಂಗ್‌ ಮಾಡಿದ್ದ ಜಸ್ವೀರ್‌ 10 ಅಂಕ ತಂದರು. ಟ್ಯಾಕ್ಲಿಂಗ್‌ ಮೂಲಕ ಮಂಜಿತ್‌ ಚಿಲ್ಲಾರ್‌ ಜೈಪುರ ತಂಡಕ್ಕೆ ನೆರವಾದರು.

ನಡೆಯಲಿಲ್ಲ ರೋಹಿತ್‌ ಜಾದೂ: ಬುಲ್ಸ್‌ ಪರ ನಾಯಕ ರೋಹಿತ್‌ ಕುಮಾರ್‌ (10 ಅಂಕ) ಏಕಾಂಗಿ ಹೋರಾಟ ನಡೆಸಿದರು. ತಂಡವನ್ನು ಗೆಲ್ಲಿಸಲು ಗರಿಷ್ಠ ಪ್ರಯತ್ನ ನಡೆಸಿದರು. ಆದರೆ ರೋಹಿತ್‌ಗೆ ತಂಡದ ಉಳಿದ ಆಟಗಾರರಿಂದ ಉತ್ತಮ ಬೆಂಬಲ ಸಿಗದ ಕಾರಣ ಪಂದ್ಯ
ಕಳೆದುಕೊಳ್ಳಬೇಕಾಯಿತು.

ಹರ್ಷವರ್ಧನ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next