Advertisement

Pro Kabaddi-10: ಬೆಂಗಾಲ್‌ಗೆ ಬಾಗಿದ ತಲೈವಾಸ್‌ ; ಹರ್ಯಾಣ ರೋಚಕ ಗೆಲುವು

10:54 PM Dec 10, 2023 | Team Udayavani |

ಬೆಂಗಳೂರು: ತೀವ್ರ ಪೈಪೋಟಿ ಕಂಡ ರವಿವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ 48-38 ಅಂತರದಿಂದ ತಮಿಳ್‌ ತಲೈವಾಸ್‌ಗೆ ಸೋಲುಣಿಸಿದೆ.

Advertisement

ಇದು ತಲೈವಾಸ್‌ಗೆ ಎದುರಾದ ಮೊದಲ ಸೋಲು. ಇನ್ನೊಂದೆಡೆ ಬೆಂಗಾಲ್‌ 3ನೇ ಪಂದ್ಯದಲ್ಲಿ 2ನೇ ಗೆಲುವು ಸಾಧಿಸಿತು. ಒಂದು ಪಂದ್ಯ ಟೈ ಆಗಿದೆ.

ಬೆಂಗಾಲ್‌ ನಾಯಕ, ರೈಡರ್‌ ಮಣಿಂದರ್‌ ಸಿಂಗ್‌ ಭರ್ಜರಿ ಪ್ರದರ್ಶನ ನೀಡಿ ಗೆಲುವಿನ ಹೀರೋ ಎನಿಸಿದರು. ಇವರದು ಸರ್ವಾಧಿಕ 16 ಅಂಕಗಳ ಸಾಧನೆ. ಇದರಲ್ಲಿ 3 ಬೋನಸ್‌ ಅಂಕಗಳಾಗಿದ್ದವು. ಡಿಫೆಂಡರ್‌ ಶುಭಂ ಶಿಂಧೆ (11 ಅಂಕ) ಮತ್ತು ರೈಡರ್‌ ನಿತಿನ್‌ ಕುಮಾರ್‌ (7 ಅಂಕ) ಕೂಡ ಆಕರ್ಷಕ ಆಟವಾಡಿದರು.

ವಿರಾಮದ ವೇಳೆ ತಮಿಳ್‌ 27-21 ಅಂತರದ ಮುನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಬೆಂಗಾಲ್‌ ಆಟ ಬಿರುಸುಗೊಂಡಿತು. ತಮಿಳ್‌ ಪರ ರೈಡರ್‌ಗಳಾದ ನರೇಂದರ್‌ 13 ಅಂಕ, ಅಜಿಂಕ್ಯ ಪವಾರ್‌ 8 ಅಂಕ ಗಳಿಸಿದರು.

ಹರ್ಯಾಣ ಗೆಲುವು
ದ್ವಿತೀಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ ತಂಡ ದಬಾಂಗ್‌ ಡೆಲ್ಲಿ ವಿರುದ್ಧ 35-33 ಅಂತರದ ರೋಚಕ ಜಯ ಸಾಧಿಸಿತು. ಹರ್ಯಾಣ ಪರ ರೈಡರ್‌ ಸಿದ್ಧಾರ್ಥ್ ದೇಸಾಯಿ 10 ಅಂಕ ಗಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next