Advertisement

Pro Kabaddi-10; ಡಿ. 2ರಿಂದ ಮತ್ತೆ ಹಳೆ ಮಾದರಿ:12 ತಾಣಗಳಲ್ಲೂ ಮುಖಾಮುಖಿ

12:08 AM Aug 18, 2023 | Team Udayavani |

ಹೊಸದಿಲ್ಲಿ: ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿ ಡಿ. 2ರಂದು ಆರಂಭವಾಗಲಿದೆ. ಎರಡು ವರ್ಷಗಳ ಬಳಿಕ ಮತ್ತೆ ಹಳೆಯ “ಕ್ಯಾರವಾನ್‌ ಮಾದರಿ’ಗೆ ಮರಳಿದ್ದು ಈ ಬಾರಿಯ ವಿಶೇಷ. ಎಲ್ಲ 12 ಫ್ರಾಂಚೈಸಿಗಳ ತವರು ಕೇಂದ್ರಗಳಲ್ಲಿ ಪಂದ್ಯಗಳನ್ನು ಆಡಲಾಗುವುದು ಎಂದು ಮಶಾಲ್‌ ಸ್ಫೋ ರ್ಟ್ಸ್ ನ ಮುಖ್ಯಸ್ಥ ಮತ್ತು ಪಿಕೆಎಲ್‌ನ ಲೀಗ್‌ ಕಮಿಷನರ್‌ ಆಗಿರುವ ಅನುಪಮ್‌ ಗೋಸ್ವಾಮಿ ತಿಳಿಸಿದರು.

Advertisement

ಕೊರೊನಾ ಕಾರಣದಿಂದ 8ನೇ ಪ್ರೊ ಕಬಡ್ಡಿ ಪಂದ್ಯಾವಳಿ ಸಂಪೂರ್ಣವಾಗಿ ಬೆಂಗಳೂರಿನ “ಬಯೋ ಬಬಲ್‌’ ಸುರಕ್ಷೆಯಲ್ಲಿ ನಡೆದಿತ್ತು. 9ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಗಳನ್ನು ಬೆಂಗಳೂರು, ಪುಣೆ, ಹೈದರಾಬಾದ್‌ ಮತ್ತು ಮುಂಬಯಿಯಲ್ಲಿ ಆಡಲಾಗಿತ್ತು.

ಮುಂಬಯಿಯಲ್ಲಿ ಸೆ. 8 ಮತ್ತು 9ರಂದು ಪ್ರೊ ಕಬಡ್ಡಿ ಹರಾಜು ನಡೆಯ ಲಿದೆ. ಸುಮಾರು 500 ಆಟಗಾರರ ಹೆಸರು ಇದರಲ್ಲಿ ಗೋಚರಿಸುವ ಸಾಧ್ಯತೆ ಇದೆ. ಪ್ರತೀ ಫ್ರಾಂಚೈಸಿಗಳಿಗೆ 7 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಇದರಿಂದ 84 ಆಟಗಾರರು ರಿಟೈನ್‌ ಆಗಲಿದ್ದಾರೆ. ಇದರ ಯಾದಿ ಕೂಡ ಪ್ರಕಟಗೊಂಡಿದೆ. ಬೆಂಗಳೂರು ಬುಲ್ಸ್‌ ಉಳಿಸಿಕೊಂಡಿರುವ ಆಟಗಾರರೆಂದರೆ ನೀರಜ್‌ ನರ್ವಾಲ್‌, ಸೌರಭ್‌ ನಂದಲ್‌, ಯಶ್‌ ಹೂಡಾ, ಭರತ್‌ ಮತ್ತು ಅಮಾನ್‌.

ಈ ಬಾರಿಯ ಹರಾಜಿನಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ -2023ರ ಫೈನಲಿಸ್ಟ್‌ ತಂಡಗಳ 24 ಆಟಗಾರರಿಗೆ ಅವಕಾಶ ನೀಡಲಾಗು ವುದು. ಹೀಗಾಗಿ ಹೊಸಮುಖಗಳ ದರ್ಶನವಾಗುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next