Advertisement

Pro Kabaddi-10: ಬೆಂಗಳೂರಿನಲ್ಲೂ ಮುಗ್ಗರಿಸಿದ ಬುಲ್ಸ್‌

10:46 PM Dec 08, 2023 | Team Udayavani |

ಬೆಂಗಳೂರು: ಹತ್ತನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್‌ನ ಸೋಲಿನ ಆಟ ಮುಂದು ವರಿದಿದೆ. ದುರಂತವೆಂದರೆ, ತವರಿನ ಅಂಗಳದಲ್ಲೂ ಬುಲ್ಸ್‌ ನಿರಾಶಾದಾಯಕ ಪ್ರದರ್ಶನ ನೀಡಿದ್ದು. ಶುಕ್ರವಾರ ಇಲ್ಲಿನ ಶ್ರೀ ಕಂಠೀರವ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖಿಯಲ್ಲಿ ದಬಾಂಗ್‌ ಡೆಲ್ಲಿ 38-31 ಅಂತರದಿಂದ ಬೆಂಗಳೂರು ತಂಡವನ್ನು ಕೆಡವಿತು. ಇದು ಡೆಲ್ಲಿಗೆ ಒಲಿದ ಮೊದಲ ಗೆಲುವು.

Advertisement

ಬೆಂಗಳೂರು ಪರ ರೈಡರ್‌ ಭರತ್‌ ಏಕಾಂಗಿ ಹೋರಾಟ ನಡೆಸಿ ಸರ್ವಾ ಧಿಕ 12 ಅಂಕ ಗಳಿಸಿದರು. 3 ಅಂಕ ತಂದಿತ್ತ ಡಿಫೆಂಡರ್‌ ಅಮಾನ್‌ ಅವರದು ಅನಂತರದ ಉತ್ತದ ಸಾಧನೆ. ವಿರಾಮದ ವೇಳೆ ಬುಲ್ಸ್‌ 10-17 ಅಂತರದ ಹಿನ್ನಡೆಯಲ್ಲಿತ್ತು. ಬುಲ್ಸ್‌ ಅಹ್ಮದಾಬಾದ್‌ ಕದನದಲ್ಲಿ ಗುಜರಾತ್‌ ಜೈಂಟ್ಸ್‌ ಮತ್ತು ಬೆಂಗಾಲ್‌ ವಾರಿಯರ್ ವಿರುದ್ಧ ಸೋಲುಣಿಸಿತ್ತು.

ಆರಂಭದಿಂದಲೇ ಹಿನ್ನಡೆ ಕಾಣುತ್ತ, ಒಂದು ಹಂತದಲ್ಲಿ ಸಮಬಲದ ಸ್ಥಿತಿ ತನಕ ತಲುಪುವ ವಿಕಾಸ್‌ ಖಂಡೋಲ ತಂಡ ಫಿನಿಶಿಂಗ್‌ನಲ್ಲಿ ಎಡವುತ್ತಲೇ ಬಂದಿದೆ. ಡೆಲ್ಲಿ ವಿರುದ್ಧ ಭರತ್‌ ಸೂಪರ್‌-10 ಸಾಧನೆಯೊಂದಿಗೆ ತಂಡದ ಆಸೆ ಚಿಗುರಿಸಿದರೂ ಉಳಿ ದವರ ಪ್ರಯತ್ನ ಸಾಲಲಿಲ್ಲ.

ದಬಾಂಗ್‌ ಡೆಲ್ಲಿ ಪರ ನಾಯಕ ನವೀನ್‌ ಕುಮಾರ್‌ ಕಪ್ತಾನನ ಆಟವಾಡಿದರು. ಅವರದು ಸರ್ವಾಧಿಕ 13 ಅಂಕಗಳ ಸಾಧನೆ. ಇದರಲ್ಲಿ 7 ಟಚ್‌ ಪಾಯಿಂಟ್‌, 5 ಬೋನಸ್‌ ಅಂಕ ಸೇರಿತ್ತು. ರೈಡರ್‌ ಆಶು ಮಲಿಕ್‌ 9 ಅಂಕ ಗಳಿಸಿದರು.

ಪುನೇರಿ ಗೆಲುವು
ಶುಕ್ರವಾರದ ದ್ವಿತೀಯ ಪಂದ್ಯ “ಮರಾಠ ಕದನ’ ಎಂದೇ ಬಿಂಬಿಸಲ್ಪಟ್ಟಿತ್ತು. ಇದರಲ್ಲಿ ಪುನೇರಿ ಪಲ್ಟಾನ್‌ 43-32 ಅಂತರದಿಂದ ಯು ಮುಂಬಾವನ್ನು ಕೆಡವಿತು. ಇದರೊಂದಿಗೆ ಪುನೇರಿ ಎರಡೂ ಪಂದ್ಯಗಳನ್ನು ಗೆದ್ದರೆ, ಮುಂಬಾ 3ನೇ ಪಂದ್ಯದಲ್ಲಿ 2ನೇ ಸೋಲನುಭವಿಸಿತು.

Advertisement

ರೈಡರ್‌ ಮೋಹಿತ್‌ ಗೋಯತ್‌ ಅಮೋಘ ಆಟದ ಮೂಲಕ ಪುನೇರಿ ಗೆಲುವಿನ ರೂವಾರಿ ಎನಿಸಿದರು. ಅವರು ಪಂದ್ಯದಲ್ಲೇ ಗರಿಷ್ಠ 12 ಅಂಕ ತಂದಿತ್ತರು. ಪಂಕಜ್‌ ಮೋಹಿತೆ 6 ಅಂಕ ಗಳಿಸಿದರು. ಯು ಮುಂಬಾ ಸಾಂ ಕ ಹೋರಾಟ ನೀಡಿತಾದರೂ ಜೋಶ್‌ ತೋರುವಲ್ಲಿ ವಿಫ‌ಲವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next