Advertisement

ಯುವಕನ ಬಂಧನ: ಹಿಂದೂಪರ ಸಂಘಟನೆಗಳ ಪ್ರತಿಭಟನೆ

03:54 PM Dec 11, 2022 | Team Udayavani |

ಶ್ರೀರಂಗಪಟ್ಟಣ: ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಕಾನೂನು ಉಲ್ಲಂಘನೆ ಮಾಡಿದ್ದ ಆರೋಪದಡಿ, ಹಿಂದು ಯುವಕನನ್ನು ಮಧ್ಯರಾತ್ರಿ 2 ಗಂಟೆಯಲ್ಲಿ ಮನೆಯಲ್ಲಿ ಬಂಧಿಸಿದ್ದು, ಪೊಲೀಸರ ಕ್ರಮ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಠಾಣೆ ಎದುರು ಪ್ರತಿಭಟಿಸಿದರು.

Advertisement

ಪಾಂಡವಪುರ ತಾಲೂಕಿನ 17 ವರ್ಷದ ಯುವಕನನ್ನು 8 ಪೊಲೀಸರ ತಂಡ ಶುಕ್ರವಾರ ಮಧ್ಯರಾತ್ರಿ ಮನೆ ಸುತ್ತುವರಿದು ಮಲಗಿದ್ದ ಯುವಕನನ್ನು ಎಬ್ಬಿಸಿ ಠಾಣೆಗೆ ಕರೆತಂದಿದ್ದಾರೆ. ಜೊತೆಗೆ ನೀನು ಕೋಮು ಗಲಭೆ ಸೃಷ್ಟಿಸಲು ಮುಂದಾದರೆ, ಕಾನೂನು ಕ್ರಮಕೈಗೊಳ್ಳುತ್ತೇವೆ, ಇನ್ನಿತರೆ ಬೆದರಿಕೆ ಒಡ್ಡಿರುವುದಾಗಿ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ರೀತಿ ಬೆದರಿಕೆ ಹಾಕಿದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಕೈ ಬಿಡಲು ಮನವಿ: ಸಂಜೆ ವೇಳೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಪ್ರತಿಭಟನಾಕಾರರಿಂದ ಮಾಹಿತಿ ಪಡೆದು, ಲಿಖೀತ ರೂಪದಲ್ಲಿ ದೂರು ನೀಡಿ, ನಂತರ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿ, ತಪ್ಪು ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ಅಹೋರಾತ್ರಿ ಧರಣಿ: ಯುವಕನ ಬಂಧಿಸಿದ ಪೊಲೀಸರ ಅಮಾನತು ಮಾಡಿ ಪ್ರಕರಣ ದಾಖಲಿಸುವಂತೆ ಪ್ರತಿಭಟನಾಕಾರರ ಮಾಡಿದ ಮನವಿಯನ್ನು ಒಪ್ಪದ ಎಸ್ಪಿ ಸಮಜಾಯಿಷಿ ನೀಡಿ, ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದ್ದಾರೆ. ಇದರಿಂದ ಬೇಸರ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಆಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಬಂಧನ: ಯಾವುದೇ ಹೀನ ಕೃತ್ಯ ಎಸಗದಂತಹ, ಕ್ಷುಲ್ಲಕ ಕಾರಣಕ್ಕಾಗಿ ಹಿಂದೂ ಯುವಕನನ್ನು ಪೊಲೀಸರು ಮಧ್ಯರಾತ್ರಿ ಬಂಧಿಸಿ ಬೆದರಿಸುವ ಮೂಲಕ ಕಾರ್ಯಕರ್ತರಲ್ಲಿ ಭಯ ಉಂಟು ಮಾಡುತ್ತಿದ್ದಾರೆ. ಯುವಕರ ಪೋಷಕರಿಗೆ, ಹಿಂದೂ ಸಂಘಟನೆಗೆ ಯಾವುದೇ ಮಾಹಿತಿ ನೀಡದೆ ಬಂಧಿಸಿರುವುದು ಖಂಡನೀಯ ಎಂದು ಪೊಲೀಸರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

Advertisement

ಯಾವುದೇ ನೋಟಿಸ್‌ ನೀಡದೆ, ಮಧ್ಯರಾತ್ರಿ ಯುವಕನ್ನು ಬಂಧಿಸಿ, ಬೆದರಿಕೆ ಒಡ್ಡಿ ಹೆದುರಿಸುವ ಪ್ರೌವೃತ್ತಿ ಯಾವ ಕಾನೂನಿನಲ್ಲಿದೆ? ಇಲ್ಲಿನ ಕೆಲ ಪೊಲೀಸರು ಹಿಂದೂ ಹಾಗೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ನಾವು ಸಹ ಲಿಖೀತ ದೂರು ನೀಡಲಿದ್ದು, ಬೆದರಿಕೆ ಒಡ್ಡಿರುವ ಪೊಲೀಸರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಇಲ್ಲದಿದ್ದಲ್ಲಿ ಮಧ್ಯರಾತ್ರಿ ಯುವಕನನ್ನು ಕರೆತಂದಿರುವ ಎಲ್ಲಾ ಪೊಲೀಸರ ವಿರುದ್ಧ ಎಫ್ ಐಆರ್‌ ದಾಖಲಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಹಿಂದೂ ಜಾಗರಣೆ ವೇದಿಕೆ, ಬಿಜೆಪಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next