Advertisement

Hamas ಕ್ರೌರ್ಯದ ಫೋಟೋಗೆ ಪ್ರಶಸ್ತಿ: ನೆಟ್ಟಿಗರು ಫುಲ್‌ ಗರಂ

01:03 AM Mar 30, 2024 | Team Udayavani |

ನ್ಯೂಯಾರ್ಕ್‌: 2023ರ ಅ.7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದ ಹಮಾಸ್‌ ಉಗ್ರರು, ಜರ್ಮನ್‌ನ ಪ್ರವಾಸಿ ಮಹಿಳೆಯೊಬ್ಬರ ಅರೆಬೆತ್ತಲೆ ಮೃತದೇಹ ಮೆರವಣಿಗೆ ನಡೆಸಿದ ಫೋಟೋಗೆ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ. ಈ ಕ್ರೌರ್ಯದ ಫೋಟೋಗೆ ಪ್ರಶಸ್ತಿ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ಈ ದಾಳಿಯಲ್ಲಿ 23 ವರ್ಷದ ಯಹೂದಿ ಶಾನಿ ಲೌಕ್‌ ಮೃತಪಟ್ಟಿದ್ದರು. ಹಮಾಸ್‌ ಉಗ್ರರು ಶಾನಿ ಲೌಕ್‌ ನಗ್ನ ಮೃತದೇಹದ ಮೆರವಣಿಗೆ ನಡೆಸಿದ ಫೋಟೋವನ್ನು ಅಸೋಸಿಯೇಟೆಡ್‌ ಪ್ರಸ್‌(ಎಪಿ) ತೆಗೆದಿದ್ದು, ಇದಕ್ಕೆ “ವರ್ಷದ ಛಾಯಾಚಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿ’ ಬಂದಿದೆ. ಈ ಪ್ರಶಸ್ತಿಯನ್ನು ಮಿಸೌರಿ ಸ್ಕೂಲ್‌ ಆಫ್ ಜರ್ನಲಿಸಂನ ಡೊನಾಲ್ಡ್‌ ಡಬ್ಲ್ಯು ರೆನಾಲ್ಡ್‌$Õ ಜರ್ನಲಿಸಂ ಇನ್‌ಸ್ಟಿಟ್ಯೂಟ್‌ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next