Advertisement

“Udayavani” ಯಶೋದಾ ಕೃಷ್ಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

12:58 AM Oct 13, 2023 | Team Udayavani |

ಉಡುಪಿ: ಮಕ್ಕಳನ್ನು ಪೋಷಿಸುವ ಕಲೆಯನ್ನು ಹೆತ್ತವರು ಕರಗತ ಮಾಡಿಕೊಳ್ಳಬೇಕು. ಅಮ್ಮ ಹೇಳುವುದನ್ನು ಕೇಳಿ ಪಾಲಿಸಿದರೆ ಮಾತ್ರ ಶಿಸ್ತು ರೂಢಿಸಿಕೊಳ್ಳಲು ಸಾಧ್ಯ ಎಂದು ಪ್ರಸಾದ್‌ ನೇತ್ರಾಲಯದ ಆಡಳಿತ ನಿರ್ದೇಶಕಿ ಡಾ| ರಶ್ಮಿ ಕೃಷ್ಣಪ್ರಸಾದ್‌ ಹೇಳಿದರು.

Advertisement

“ಉದಯವಾಣಿ’ಯು ಜಯಲಕ್ಷ್ಮೀ ಸಿಲ್ಕ್ ಬನ್ನಂಜೆ ಅವರ ಸಹಯೋಗದಲ್ಲಿ ಆಯೋಜಿಸಿದ್ದ “ಮನೆ ಮನೆಯಲ್ಲಿ ಯಶೋದಾ ಕೃಷ್ಣ ಫೋಟೋಸ್ಪರ್ಧೆ-2023’ರ ವಿಜೇತರಿಗೆ ವುಡ್‌ಲ್ಯಾಂಡ್‌ ಹೊಟೇಲ್‌ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮಗಳಿಗೆ “ಉದಯವಾಣಿ’ ವೇದಿಕೆ ಒದಗಿಸಿರು ವುದು ಆಭಿನಂದನೀಯ ಕಾರ್ಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಅದ್ಭುತ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಅಶಿಸಿದರು.

ಮಂಜುನಾಥ ಕಣ್ಣಿನ ಆಸ್ಪತ್ರೆಯ ಆಡಳಿತ ನಿರ್ದೇಶಕಿ, ನೇತ್ರತಜ್ಞೆ ಡಾ| ಶಕೀಲಾ ಅವರು ಮಾತನಾಡಿ, ತಾಯಿಯಾಗಿ ಮಹಿಳೆಯರಿಗೆ ಹೆಚ್ಚಿನ ಗೌರವವಿದೆ. ಮಹಿಳೆಯರ ಕೆಲಸಗಳನ್ನು ಶ್ಲಾ ಸುವ ಕಾರ್ಯವಾಗಬೇಕು. ಎಲ್ಲ ತಾಯಂದಿರ ಪಾತ್ರವೂ ಇದ ರಲ್ಲಿ ಪ್ರಾಮುಖ್ಯ ವಹಿಸುತ್ತದೆ ಎಂದರು.

ಬನ್ನಂಜೆಯ ಜಯಲಕ್ಷ್ಮೀ ಸಿಲ್ಕ್ಸ್‌ ನಿರ್ದೇಶಕಿ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ ಮಾತನಾಡಿ, ಮಕ್ಕಳನ್ನು ಫೋಟೋಗೆ ಪೋಸ್‌ ನೀಡಲು ಹೆತ್ತವರು ಎಷ್ಟು ಕಷ್ಟಪಟ್ಟಿದ್ದಾರೆ ಎಂದು ಹೇಳುವುದೇ ಅಸಾಧ್ಯ. ಇಂತಹ ಕಾರ್ಯಕ್ರಮ ರೂಪಿಸಿದ “ಉದಯವಾಣಿ’ ಉತ್ತಮ ಕೆಲಸ ನಿರ್ವಹಿಸಿದೆ ಎಂದರು.

Advertisement

“ಉದಯವಾಣಿ’ಯ ಮಣಿಪಾಲ ಹಾಗೂ ಮುಂಬಯಿ ಆವೃತ್ತಿಯ ಸಂಪಾದಕ ಅರವಿಂದ ನಾವಡ ಅಧ್ಯಕ್ಷತೆ ವಹಿಸಿ, ಈ ಬಾರಿ ಸ್ಪರ್ಧೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಫೋಟೋಗಳನ್ನು ಕಳುಹಿಸಿದ್ದರು. 6 ವರ್ಷಗಳಲ್ಲಿ ಯಶೋದಾ ಕೃಷ್ಣ ಸ್ಪರ್ಧೆ ಗ್ರಾಮೀಣ ಪ್ರದೇಶವನ್ನೂ ತಲುಪಿದೆ. ಇದಕ್ಕೆ ಗ್ರಾಮೀಣ ಭಾಗದಿಂದ ಬರುತ್ತಿರುವ ಫೋಟೋಗಳೇ ಜಾಸ್ತಿ ಎಂದರು. ಬಹಳಷ್ಟು ಬೆಳೆದಿದೆ ನಗರದಂತೆ ಗ್ರಾಮೀಣ ಭಾಗಗಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ನೃತ್ಯ ವಿದುಷಿ ಶ್ರೀವಿದ್ಯಾ ಸಂದೇಶ್‌ ತೀರ್ಪುಗಾರರಾಗಿ ಸಹಕರಿಸಿದ್ದರು.

ಎಂಎಂಎನ್‌ಎಲ್‌ ಉಪಾಧ್ಯಕ್ಷ (ನ್ಯಾಶನಲ್‌ ಹೆಡ್‌-ಮ್ಯಾಗಜಿನ್‌ ಆ್ಯಂಡ್‌ ಸ್ಪೆಷಲ್‌ ಇನೀಶಿಯೇಟಿವ್ಸ್‌) ರಾಮಚಂದ್ರ ಮಿಜಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ಉಡುಪಿ ಮಾರು ಕಟ್ಟೆ ವಿಭಾಗದ ರೀಜನಲ್‌ ಮ್ಯಾನೇಜರ್‌ ರಾಧಾಕೃಷ್ಣ ಕೊಡವೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹಾಯಕ ಸಂಪಾದಕ ರಾಜೇಶ್‌ ಮೂಲ್ಕಿ ವಂದಿಸಿದರು. ಹಿರಿಯ ವಾಣಿಜ್ಯ ವರದಿಗಾರ ಎಸ್‌.ಜಿ. ನಾಯ್ಕ ಸಿದ್ದಾಪುರ ನಿರೂಪಿಸಿದರು.

ಬಹುಮಾನಿತರ ವಿವರ

ಪ್ರಥಮ ವಿಭಾಗ -ಅನೈರಾ ಉಡುಪಿ, ದ್ವಿತೀಯ ಸುಪ್ರಿತಾ ಕೆ.ಎಸ್‌.- ಇಶಾನ್‌ ಬಿ.ಎ. ಬೀರಮಂಗಲ ಸುಳ್ಯ, ಧನ್ಯಶ್ರೀ -ಸಾಕೇತ್‌ ಪುತ್ತೂರು, ಅಂಕಿತಾ ಜಿ.- ಅರವಿ ಆರ್‌. ಪರ್ಕಳ, ತೃತೀಯ-ಸಮತಾ-ಆರಾದಿತಾ ಆದಿಉಡುಪಿ, ರಶ್ಮಿತಾ-ವಿಹಾನಿ ಮಂಗಳೂರು, ದಿವ್ಯಾ-ಧ್ರುವಿ ವಿ. ಸರಪಾಡಿ ಬಂಟ್ವಾಳ, ಚೈತ್ರಾ ಎಸ್‌. ಅಧಿನಿ ಎಸ್‌., ಕುಕ್ಕುಂದೂರು ಕಾರ್ಕಳ, ರಕ್ಷತಾ-ರಿತಿಕಾ, ಉರ್ವ ಮಾರ್ಕೆಟ್‌ ಮಂಗಳೂರು, ಪ್ರತಿಮಾ ಅಶ್ವತ್ಥ್-ಕೃತಿ ಎ. ಕೋಟ-ಪಡುಕರೆ.

ಪ್ರೋತ್ಸಾಹಕರ: ಅಶ್ವಿ‌ನಿ ಸುಶಾಂತ್‌-ದಿಯಾನ್ಸ್‌ ಸೋಮೇಶ್ವರ -ಕೋಟೆಕಾರ್‌, ಕಾವ್ಯಶ್ರೀ ಶಾರ್ವರಿ ಕುತ್ಪಾಡಿ, ಅಕ್ಷತಾ ಆರ್‌.-ಲಹಾರ್ವಿ ಅಂಬಾಗಿಲು ಉಡುಪಿ, ಶಮಿತಾ ಪ್ರಕಾಶ್‌-ದಿಯಾ ನಡ ಬೆಳ್ತಂಗಡಿ, ಪೂಜಿತಾ-ಅವ್ಯಕ್ತ ತೆಂಕಪೇಟೆ ಉಡುಪಿ, ಪ್ರೀತಿ ಬಿ.-ಪ್ರಣವ್‌ ಕುಂದಾಪುರ, ಅಶ್ವಿ‌ನಿ ಅಖೀಲ್‌- ಶ್ರೀಸ್ಕಂದ, ಚಿಲಿಂಬಿ ಮಂಗಳೂರು, ಡಾ| ಭಾರ್ಗವಿ ಮುರಳೀಕೃಷ್ಣ-ಆಕರ್ಷ್‌ ಎಂ. ಪರ್ಕಳ, ಸಾನ್ವಿಕಾ ಭಕ್ತ ಗುಂಡಿಬೈಲು ಉಡುಪಿ, ಸೀಮಾ ನಿತಿನ್‌-ನಿಧಿ ಮೂಲ್ಕಿ, ರೂಪಾ-ತಪಸ್ವಿ ಎಸ್‌. ಬ್ರಹ್ಮಾವರ, ಯಶಸ್ವಿ-ಕ್ಷಿತೀಶಾ ಶಂಕರ್‌ ಪರ್ಲಡ್ಕ ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next