Advertisement
“ಉದಯವಾಣಿ’ ವತಿಯಿಂದ ಉಡುಪಿಯ ಆರ್ಟಿಸ್ಟ್ ಫೋರಂ ಸಹ ಯೋಗದಲ್ಲಿ ಶನಿವಾರ ಮಂಗಳೂರು ಕೊಡಿಯಾಲಬೈಲ್‌ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಸಭಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ “ಉದಯವಾಣಿ ಚಿಣ್ಣರ ಬಣ್ಣ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ “ಉದಯವಾಣಿ’ ಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್ ಮಾತ ನಾಡಿ, ಮಕ್ಕಳ ಚಿತ್ರಗಳಲ್ಲಿ ಅವರ ಕಲ್ಪನಾ ಲೋಕ ಅನಾವರಣಗೊಂಡಿದೆ. ಸ್ಪರ್ಧೆಯಲ್ಲಿ ಗೆಲುವು – ಸೋಲು ಮುಖ್ಯವಲ್ಲ. ಚಿತ್ರ ರಚನೆಯ ವೇಳೆ ಅನುಭವಿಸುವ ಆನಂದವೇ ಮುಖ್ಯ. ಆದೇ ನಿಜವಾದ ಖುಷಿ. ದೇವರು ವಿಶೇಷವಾಗಿ ನೀಡಿರುವ ಈ ವರವನ್ನು ಇಲ್ಲಿಗೇ ನಿಲ್ಲಿಸದೆ ಸುತ್ತಮತ್ತಲಿನ ಪ್ರಪಂಚವನ್ನು ಕುಂಚದ ಮೂಲಕ ನಿರಂತರವಾಗಿ ಚಿತ್ರಿಸಬೆಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
Related Articles
Advertisement
ಮಾಡರ್ನ್ ಕಿಚನ್ ಸಂಸ್ಥೆಯ ಜನರಲ್ ಮ್ಯಾನೇಜರ್ ಡಾ| ಹರೀಶ್ ಕಿನಿಲಕೋಡಿ ಮಾತನಾಡಿ, ಮಕ್ಕಳಲ್ಲಿನ ಕಲಾ ಪ್ರತಿಭೆಯ ಅನಾವರಣಕ್ಕೆ ಚಿಣ್ಣರ ಬಣ್ಣ ಸಹಾಯಕವಾಗಿದೆ ಎಂದರು.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ ಮಾತನಾಡಿ, ಈ ಚಿತ್ರಕಲಾ ಸ್ಪರ್ಧೆಯ ಮೂಲಕ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನಾರ್ಹ ಎಂದು ಹೇಳಿದರು.
ಆರ್ಟಿಸ್ಟ್ ಫೋರಂ ಅಧ್ಯಕ್ಷ ರಮೇಶ್ ರಾವ್ ಮಾತನಾಡಿ, ಪಾರದರ್ಶಕವಾಗಿ ಬಹುಮಾನ ಘೋಷಿಸುವುದು ಈ ಸ್ಪರ್ಧೆಯವೈಶಿಷ್ಟ್ಯ ಎಂದು ತಿಳಿಸಿದರು.
ಉದಯವಾಣಿ ಸಂಪಾದಕ ಅರವಿಂದ ನಾವಡ ಮಾತನಾಡಿ, ಪತ್ರಿಕೆಯು ಸೃಜನಶೀಲತೆ, ಪರಂಪರೆ ಹಾಗೂ ಸಂಸ್ಕೃತಿ ಯನ್ನು ಬುನಾದಿಯಾಗಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿದೆ. ಚಿಣ್ಣರ ಬಣ್ಣ ಸೃಜನಶೀಲತೆಯ ಒಂದು ಭಾಗ ಎಂದರು.
“ಉದಯವಾಣಿ’ ಮ್ಯಾಗಜೀನ್ಸ್ ಆ್ಯಂಡ್ ಸ್ಪೆಷಲ್ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಸ್ವಾಗತಿ, ಪ್ರಸ್ತಾವನೆಗೈದು, 200 ವಿದ್ಯಾರ್ಥಿಗಳಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಈ ಬಾರಿ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಈ ಚಿತ್ರಕಲಾ ಸ್ಪರ್ಧೆ ಮೂಲಕ ನಿಜ ಅರ್ಥದಲ್ಲಿ ಮಕ್ಕಳ ದಿನಾಚರಣೆ ಯನ್ನು ಉದಯವಾಣಿ ಆಚರಿಸಿದೆ ಎಂದರು.
“ಉದಯವಾಣಿ’ ಮಂಗಳೂರಿನ ರೀಜನಲ್ ಮ್ಯಾನೇಜರ್ ಸತೀಶ್ ಮಂಜೇಶ್ವರ ಬಹುಮಾನ ವಿಜೇತರ ವಿವರ ನೀಡಿದರು. ಮಂಗಳೂರು ವಿಭಾಗದ ಮುಖ್ಯ ವರದಿಗಾರ ವೇಣು ವಿನೋದ್ ಕೆ.ಎಸ್. ವಂದಿಸಿದರು. ಹಿರಿಯ ವರದಿಗಾರ ದಿನೇಶ್ ಇರಾ ನಿರೂಪಿಸಿದರು.
ಆರ್ಟಿಸ್ಟ್ ಫೋರಂ ಸಹಕಾರ ಉಡುಪಿ ಆರ್ಟಿಸ್ಟ್ ಫೋರಂನ ಕಲಾವಿದರಾದ ಗಣೇಶ್ ರಾವ್, ಸಕು ಪಾಂಗಾಳ, ಎಚ್.ಕೆ. ರಾಮಚಂದ್ರ, ಹರಿಪ್ರಸಾದ್, ರೇಷ್ಮಾ ಶೆಟ್ಟಿ ಮತ್ತು ಪೆರ್ಮುದೆ ಮೋಹನ್ ಕುಮಾರ್ ತೀರ್ಪುಗಾರರಾಗಿದ್ದರು. ತಾಲೂಕು, ಜಿಲ್ಲಾ ಮಟ್ಟದ
ವಿಜೇತರಿಗೆ ಬಹುಮಾನ ವಿತರಣೆ
ದ.ಕ., ಉಡುಪಿ ಜಿಲ್ಲೆಗಳಲ್ಲಿ ನಡೆದಿದ್ದ ತಾಲೂಕು ಮಟ್ಟದ ಚಿಣ್ಣರ ಬಣ್ಣ ವಿಜೇತರಾಗಿದ್ದ 140 ವಿದ್ಯಾರ್ಥಿಗಳು ಹಾಗೂ ಶನಿವಾರ ನಡೆದ ಉಭಯ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ 24 ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಅತಿಥಿ ಗಳು ಬಹುಮಾನ ವಿತರಿಸಿದರು. ಉಭಯ ಜಿಲ್ಲಾ ಸ್ಪರ್ಧಾ ವಿಜೇತರು
ಸಬ್ ಜೂನಿಯರ್ ವಿಭಾಗ: ಪ್ರಥಮ: ಪಾವನಿ ಜಿ. ರಾವ್, ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ ಉಡುಪಿ, ದ್ವಿತೀಯ: ನಿಹಾರಿಕಾ ಎಂ. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ, ತೃತೀಯ: ದಿಶ್ಮಾ ಕುಲಾಲ್ ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ. ಸಮಾಧಾನಕರ: ದ್ವಿತಿ ಚಿರಾಗ್ (ಕೇಂಬ್ರಿಡ್ಜ್ ಸ್ಕೂಲ್ ನೀರುಮಾರ್ಗ), ಶರಣ್ಯಾ ಎಸ್. (ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರ), ಪ್ರಭಾತ್ ಉಡುಪ (ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ), ಪುಷ್ಟಿ ಪೂಜಾರಿ (ಸಿಲಾಸ್ ಇಂಟರ್ ನ್ಯಾಶನಲ್ ಶಾಲೆ ಉಡುಪಿ), ತತ್ವಾರ್ ಶೆಟ್ಟಿ (ಶ್ರೀ ಶಾರದಾ ವಿದ್ಯಾಲಯ ಮಂಗಳೂರು).
ಜೂನಿಯರ್ ವಿಭಾಗ: ಪ್ರಥಮ: ವಿನೀಶ್ ಆಚಾರ್ಯ ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ, ದ್ವಿತೀಯ: ಅವನಿ ಎ.ಅರಿಗ, ಶ್ರೀ ಲಕ್ಷ್ಮೀ ಜನಾರ್ದನ ಇಂಟರ್‌ನ್ಯಾಶನಲ್ ಸ್ಕೂಲ್ ಬೆಳ್ಮಣ್, ತೃತೀಯ: ವಿಶ್ರುತ್ ಸಾಮಗ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ. ಸಮಾಧಾನಕರ: ಶ್ರುತಿ ಆಚಾರ್ಯ (ಕೆ.ಪಿ.ಎಸ್. ಮುನಿಯಾಲ್), ಕೃಷ್ಣಪ್ರಸಾದ್ ಭಟ್ (ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ), ನಿಹಾರ್ ಜೆ.ಎಸ್. (ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ), ಹನ್ಸಿಕಾ (ಕೆನರಾ ಹೈ ಸ್ಕೂಲ್ ಉರ್ವ), ಅನ್ವಿತ್ ಆರ್.ಶೆಟ್ಟಿಗಾರ್ (ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ ಕನ್ನರ್ಪಾಡಿ ಉಡುಪಿ).
ಸೀನಿಯರ್ ವಿಭಾಗ: ಪ್ರಥಮ: ಅಕ್ಷಜ್, ಎನ್‌ಐಟಿಕೆ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್, ದ್ವಿತೀಯ: ಕೆ. ಪ್ರತಿಷ್ಠಾ ಶೇಟ್, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ತೃತೀಯ: ಪ್ರಮುಖ್ ಎಸ್. ಐತಾಳ (ಶಾರದಾ ವಿದ್ಯಾಲಯ ಮಂಗಳೂರು). ಸಮಾಧಾನಕರ: ದೀಪಿಕಾ ಭಟ್ (ಸೈಂಟ್ ಸಿಸಿಲೀಸ್ ಹೈಸ್ಕೂಲ್ ಉಡುಪಿ), ಸ್ಪಶಾì ಪ್ರದೀಪ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ), ಅನಘಾ ಕೆ.ಸಿ. (ಶ್ರೀ ಶಾರದಾ ಗರ್ಲ್ಸ್ ಹೈಸ್ಕೂಲ್ ಸುಳ್ಯ), ಪರೀಕ್ಷಿತ್ ಆಚಾರ್ (ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ), ಕಿಶನ್ ಎಸ್. ಪೂಜಾರಿ (ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುರತ್ಕಲ್) ನಿರೀಕ್ಷೆಗೂ ಮೀರಿ ಸ್ಪಂದನೆ
ದ.ಕ., ಉಡುಪಿ ಜಿಲ್ಲೆಯ ಒಟ್ಟು 16 ತಾಲೂಕುಗಳಲ್ಲಿ ನಡೆದ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ 20 ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಿ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದು, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷ.