ಮಂಡ್ಯ: ಕಳೆದ ವರ್ಷ ನಡೆದ ಗ್ರಾಮೀಣ ಕ್ರೀಡಾಕೂಟದಲ್ಲಿ ಗೆದ್ದ ತಂಡಗಳಿಗೆ ಇನ್ನೂ ಬಹುಮಾನ ಮೊತ್ತ ಬಾರದೆ ಇರುವುದು ಕ್ರೀಡಾಳುಗಳಲ್ಲಿ ನಿರಾಶೆ ಮೂಡಿಸಿದೆ.
ಕಳೆದ ವರ್ಷ ಆ.28ರಂದು ದಸರಾ ಹಾಗೂ ರಾಜ್ಯದ ವಿವಿಧೆಡೆ ಗ್ರಾಮೀಣ ಕ್ರೀಡಾಕೂಟ ನಡೆಸಲಾಗಿತ್ತು. ಗೆದ್ದ ತಂಡಗಳಿಗೆ ಬಹುಮಾನ ಮೊತ್ತ ನೀಡುವುದಾಗಿ ಆಗಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ವಿಜೇತರಾದ ಸ್ಪ ರ್ಧೆಗಳಿಗೆ ಮೊತ್ತ ಬಂದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ. ಆದರೆ ಬರುವ ಕ್ರೀಡಾಸ್ಪ ರ್ಧೆಗಳಿಗೆ ಯಾವುದೇ ಪ್ರೋತ್ಸಾಹ ಇಲ್ಲದಂತಾಗಿದೆ. ತಾವೇ ಸ್ವಂತ ಖರ್ಚಿನಲ್ಲಿ ಬಂದು ಆಡುತ್ತಾರೆ. ಕನಿಷ್ಠ ಸೌಲಭ್ಯವನ್ನೂ ಕೊಡುವುದಿಲ್ಲ. ಗೆದ್ದ ಬಹುಮಾನ ಮೊತ್ತವನ್ನೂ ನೀಡದೆ ಸರ್ಕಾರ ಹಾಗೂ ಇಲಾಖೆ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಕ್ರೀಡಾಸ್ಪ ರ್ಧಿಗಳು ದೂರುತ್ತಾರೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ವಿಜೇತರಾದ ಸ್ಪ ರ್ಧೆಗಳಿಗೆ ಪ್ರಥಮ ಬಹುಮಾನ ವಾಗಿ 3 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಲಾಗಿತ್ತು.
ಮಂಡ್ಯ, ಚಿಕ್ಕಮಗಳೂರಲ್ಲಿ ರಾಜ್ಯಮಟ್ಟದ ಸ್ಪರ್ಧೆ: ಗ್ರಾಮೀಣ ಕ್ರೀಡಾಕೂಟಗಳಲ್ಲಿ ಹಂತ ಹಂತವಾಗಿ ಗೆದ್ದು ಬಂದವರು ಮಂಡ್ಯ ಹಾಗೂ ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸಲಾಗಿತ್ತು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆದಿತ್ತು. ವಿಜೇತರಾದವರ ಬ್ಯಾಂಕ್ ಖಾತೆಗೆ ನೇರವಾಗಿ ಬಹುಮಾನದ ಮೊತ್ತ ಹಾಕುವುದಾಗಿ ಸರ್ಕಾರ ಹೇಳಿತ್ತು. ಆ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಕ್ರೀಡಾ ಇಲಾಖೆಗಳಿಂದ ವಿಜೇತ ಸ್ಪ ರ್ಧಿಗಳಿಂದ ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲಾತಿ ಪಡೆಯಲಾಗಿತ್ತು. ಆದರೆ ಖಾತೆಗೆ ಹಣ ಬಂದಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾನು ಹಲವು ಬಾರಿ ಇಲಾಖೆಯ ಗಮನಕ್ಕೆ ತಂದಿದ್ದೇನೆ. ಇದರ ಬಗ್ಗೆ ದಿಶಾ ಸಭೆಯಲ್ಲೂ ಚರ್ಚೆ ನಡೆಸಿದ್ದೇನೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.
-ಅರುಣಕುಮಾರಿ, ದಿಶಾ ಸಮಿತಿ ಸದಸ್ಯೆ, ಮಂಡ್ಯ
ನಾವು ಗ್ರಾಮೀಣ ಭಾಗದಿಂದ ಬಂದು ಸಾಲ ಮಾಡಿ ತಂಡ ಕಟ್ಟಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಕಷ್ಟು ಖರ್ಚು ಮಾಡಿದ್ದೇವೆ. ಆದರೆ ಸರ್ಕಾರ ಪ್ರೋ›ತ್ಸಾಹ ನೀಡದೆ ನಿರ್ಲಕ್ಷ್ಯ ವಹಿಸಿರುವುದು ಗ್ರಾಮೀಣ ಪ್ರತಿಭೆಗಳಿಗೆ ತೊಂದರೆಯಾಗುತ್ತಿದೆ.
-ಅಮೃತ್‌ಕುಮಾರ್, ವಾಲಿಬಾಲ್ ತಂಡದ ತರಬೇತಿದಾರ, ಮಂಡ್ಯ
ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪ ರ್ಧಿಗಳಿಗೆ ಬಹುಮಾನದ ಮೊತ್ತ ಹಾಕುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಅದಕ್ಕಾಗಿ ಇಲಾಖೆಯಿಂದ ಎಲ್ಲ ಸ್ಪ ರ್ಧಿಗಳ ವಿವರ, ದಾಖಲಾತಿ ಪಡೆದು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದಲೇ ನೇರವಾಗಿ ಖಾತೆಗಳಿಗೆ ಹಣ ಜಮೆ ಆಗಲಿದೆ. –
ಜಿ.ಓಂಪ್ರಕಾಶ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ/ಕ್ರೀಡಾ ಇಲಾಖೆ, ಮಂಡ್ಯ
-ಎಚ್.ಶಿವರಾಜು