ಪ್ರಿಯಾಂಕಾ ಉಪೇಂದ್ರ ಇತ್ತೀಚೆಗೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಈಗ ಹೊಸ ಸಿನಿಮಾವೊಂದರಲ್ಲಿ ಡಿಟೆಕ್ಟಿವ್ ಪಾತ್ರ ಮಾಡುತ್ತಿದ್ದಾರೆ.
ಆ ಪಾತ್ರದಲ್ಲಿ ಅವರು ಹೆಸರು ತೀಕ್ಷ್ಣ. ಅಲ್ಲಿಗೆ ನೀವು ಪ್ರಿಯಾಂಕಾ ಅವರನ್ನು “ಡಿಟೆಕ್ಟಿವ್ ತೀಕ್ಷ್ಣ’ ಎಂದು ಕರೆಯಲಡ್ಡಿಯಿಲ್ಲ. ಹದಿಮೂರು ವರ್ಷಗಳಕಾಲ ನಿರ್ದೇಶನ ವಿಭಾಗದಲ್ಲಿ ಅನುಭವ ಪಡೆದುಕೊಂಡಿರುವ ಮಂಡ್ಯದ ತ್ರಿವಿಕ್ರಮ ರಘು ಕತೆ, ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಶೂಟಿಂಗ್ ವೇಳೆ ಗಾಯ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದಾಖಲು
ಶ್, ಯು ಟರ್ನ್ ಹಾಗೂ ತೆಲುಗಿನ ಎವರು ಚಿತ್ರಗಳು ಹೊಸಕತೆ ಬರೆಯಲು ಸ್ಫೂರ್ತಿಯಂತೆ. ಚಿತ್ರವನ್ನು ಗೌತಮ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಶ್ರೀದೇವಿ ಚಾಮುಂಡಿ ಸಿನಿ ಕ್ರಿಯೇಶನ್ಸ್ ನಿರ್ಮಿಸುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, ಅಪರಾಧ ಚಟುವಟಿಕೆಗಳನ್ನು ಚಾಣಾಕ್ಷತನದಿಂದ ಹೇಗೆ ಕಂಡು ಹಿಡಿಯುತ್ತಾಳೆ ಎಂಬುದು ಚಿತ್ರದ ಹೈಲೈಟ್. ವಿನೂತನ ರೀತಿಯ ದಿನಚರಿ ಈಕೆಯದಾಗಿರುತ್ತದೆ. ಎಲ್ಲೂ ಮಾಡಿರದ ಪಾತ್ರ ಹಾಗೂ ಹಲವು ಗೆಟಪ್ಗ್ಳಲ್ಲಿ ಪ್ರಿಯಾಂಕಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ.