Advertisement
ಇವರೊಂದಿಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶದ ಪಶ್ಚಿಮ ವಲಯದ ಉಸ್ತುವಾರಿ ಹೊತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ ಲಕ್ನೋಗೆ ಆಗಮಿಸಲಿದ್ದು, ಈ ಮೂವರೂ ನಾಯಕರು ವಿಮಾನ ನಿಲ್ದಾಣದಿಂದ ರೋಡ್ ಶೋ ಮೂಲಕ ಲಕ್ನೋದಲ್ಲಿನ ಕಾಂಗ್ರೆಸ್ ಕಚೇರಿಗೆ ಬರಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಂಶು ಅವಸ್ತಿ ತಿಳಿಸಿದ್ದಾರೆ. ರಾಹುಲ್ ಅವರು ಅಂದೇ ಹೊಸದಿಲ್ಲಿಗೆ ಹಿಂದಿರುಗಲಿದ್ದು, ಪ್ರಿಯಾಂಕಾ ನಾಲ್ಕು ದಿನಗಳ ಕಾಲ ತಮ್ಮ ವಲಯದಲ್ಲಿ ಸುತ್ತಾಡಿ, ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ರಫೇಲ್ ಒಪ್ಪಂದ ಕುರಿತಂತೆ ಐದೇ ಐದು ನಿಮಿಷದ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೂಮ್ಮೆ ಬಹಿರಂಗ ಸವಾಲು ಹಾಕಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, “”ಮೋದಿಯವರೇ ನಿಮಗೆ 56 ಇಂಚು ಎದೆ ಎಂದು ನೀವೇ ಹೇಳಿಕೊಂಡಿದ್ದೀರಿ. ಹಾಗಿದ್ದರೆ, ಬನ್ನಿ. ಸಾರ್ವಜನಿಕರ ಮುಂದೆ ರಫೇಲ್ ಕುರಿತಂತೆ ಚರ್ಚಿಸೋಣ” ಎಂದಿದ್ದಾರೆ. ಜತೆಗೆ, “”ಮೋದಿ ಈ ಚರ್ಚೆಗೆ ಆಗಮಿಸಲಾರರು. ಅವರೊಬ್ಬ ಪುಕ್ಕಲ ಆಸಾಮಿ” ಎಂದಿದ್ದಾರೆ. “”ಬಿಜೆಪಿಯ ಮೂಲಕ ಆರ್‌ಎಸ್‌ಎಸ್, ಸರ್ಕಾರಿ ಸಂಸ್ಥೆಗಳನ್ನು ಆಕ್ರಮಣ ಮಾಡುತ್ತಿದೆ. ಇದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲೂ ಆಕ್ರಮಣ ಮಾಡಿಕೊಳ್ಳಲು ಯತ್ನಿಸಿತ್ತು. ಆದರೀಗ, ಆ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರಕಾರ, ಅಂಥವರನ್ನು ಆಡಳಿತ ವ್ಯವಸ್ಥೆಯಿಂದ ಹೊರಗಿಡಲಿದೆ” ಎಂದಿದ್ದಾರೆ.