ಹೊಸದಿಲ್ಲಿ: ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿ ಕೊಂಡು ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಸಚಿನ್ ಪೈಲಟ್ ಅವರನ್ನು ಛತ್ತೀಸ್‌ಗಢದ ಉಸ್ತುವಾರಿಯನ್ನಾಗಿ ನೇಮಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಉತ್ತರ ಪ್ರದೇಶ ಹೊಣೆಗಾರಿಕೆಯಿಂದ ಮುಕ್ತಿಗೊಳಿಸಲಾಗಿದೆ.
ಸಚಿನ್ ಅಸಮಾಧಾನವನ್ನು ಶಮನ ಗೊಳಿಸುವ ಪ್ರಯತ್ನ ಇದೆಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಸ್ಥಾನಕ್ಕೆ ಹಿರಿಯ ನಾಯಕ ಅವಿನಾಶ್ ಪಾಂಡೆ ಅವರನ್ನು ಉತ್ತರ ಪ್ರದೇಶ ಉಸ್ತುವಾರಿಯಾಗಿ ಎಐಸಿಸಿ ನೇಮಿಸಿದೆ.
ಇನ್ನೊಂದೆಡೆ ಕೇರಳದ ಪ್ರಮುಖ ಕಾಂಗ್ರೆಸ್ ರಮೇಶ್ ಚೆನ್ನಿತ್ತಲ ಅವರನ್ನು ಮಹಾರಾಷ್ಟ್ರ ಉಸ್ತುವಾರಿಯಾಗಿ ಪಕ್ಷ ನೇಮಿಸಿದೆ. ಕೇರಳ ಹಾಗೂ ಲಕ್ಷದ್ವೀಪ ಉಸ್ತುವಾರಿಯಾಗಿ ದೀಪ ದಾಸ್‌ಮುನ್ಶಿ ಅವರನ್ನು ನೇಮಿಸಲಾಗಿದೆ. ಇವರಿಗೆ ತೆಲಂಗಾಣ ಕಾಂಗ್ರೆಸ್‌ನ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ.
ಉತ್ತರಾಖಂಡ ಉಸ್ತುವಾರಿಯಾಗಿ ಕುಮಾರಿ ಸಲ್ಜಾ ಅವರನ್ನು ಕಾಂಗ್ರೆಸ್ ನೇಮಿಸಿದೆ.