Advertisement
ಗೋಪಾಡಿ ಗ್ರಾ.ಪಂ., ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊರಗ ಸಂಘಟನೆ ಉಡುಪಿ ಇವರ ಆಶ್ರಯದಲ್ಲಿ ರೋಶನಿ ಧಾಮದಲ್ಲಿ ಜು. 4ರಂದು ನಡೆದ ಕೊರಗ ಸಮುದಾಯದ ಯುವ ಜನತೆಗೆ ಶೈಕ್ಷಣಿಕ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಪುತ್ರನ್ ಅಧ್ಯಕ್ಷತೆ ವಹಿಸಿ ಮತನಾಡಿ, ಗೋಪಾಡಿ ಗ್ರಾ.ಪಂ. ಕೊರಗ ಸಮುದಾಯದ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದೆ. ಕೊರಗ ಕಾಲೊನಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿದ್ದೇವೆ. ಸಾಧ್ಯವಾದಷ್ಟು ಪರಿಹಾರ ಮಾಡುವ ಕೆಲಸವೂ ಆಗಿದೆ. ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 8,9 ನೇ ತರಗತಿಗೆ ಶಾಲೆ ಬಿಟ್ಟ ಕೊರಗ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಟ್ಯೂಷನ್ ನೀಡಿ ಎಸೆಸೆಲ್ಸಿ ಪರೀಕ್ಷೆ ಯನ್ನು ಬರೆಸುವ ಕಾರ್ಯ ಮಾಡುತ್ತಿದ್ದೇವೆ. ಇದಕ್ಕೆ ಒಬ್ಬರು ನುರಿತ ಶಿಕ್ಷಕರ ಆವಶ್ಯಕತೆ ಇದೆ ಎಂದರು.
ಜಿ.ಪಂ. ಕಾರ್ಯನಿರ್ವಹಣಾ ಧಿಕಾರಿ ಶಿವಾನಂದ ಕಾಪಸಿ, ತಾ.ಪಂ. ಸದಸ್ಯೆ ವೈಲೆಟ್ ಬರೆಟ್ಟೋ, ಗ್ರಾ.ಪಂ. ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ, ಕೊರಗ ಸಂಘಟನೆ ಅಧ್ಯಕ್ಷ ಗಣೇಶ, ಗ್ರಾ.ಪಂ.ಸದಸ್ಯೆ ಬಬಿತಾ, ಸಂಪನ್ಮೂಲ ವ್ಯಕ್ತಿ ನರೇಂದ್ರ ಕುಮಾರ್ ಕೋಟ, ಸಮಗ್ರ ಗಿರಿಜನ ಯೋಜನೆಯ ಇಲಾಖಾ ಅಧಿಕಾರಿ ಉಪಸ್ಥಿತರಿದ್ದರು.
ಸರಸ್ವತಿ ಪುತ್ರನ್ ಸ್ವಾಗತಿಸಿ, ಕೊರಗ ಸಂಘಟನೆಯ ಗಣೇಶ ಬಾರಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗಣೇಶ ಕಾರ್ಯ ಕ್ರಮ ನಿರ್ವಹಿಸಿದರು.